- ಜಹೀರ್ ಇಕ್ಬಾಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ನಟಿ ಸೋನಾಕ್ಷಿ
- ಸೋನಾಕ್ಷಿ ಮದುವೆ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವುದಿಲ್ಲ
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ತನ್ನ ಬಾಯ್ ಫ್ರೆಂಡ್ ಜಹೀರ್ ಇಕ್ಬಾಲ್ ಅವರ ಇಂದು ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ತಂದೆ ಶತ್ರುಘ್ನ ಸಿನ್ಹಾ ಮದುವೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮದುವೆಗೆ ಕರೆದರೆ ದಂಪತಿಗಳಿಗೆ ಆಶೀರ್ವಾದ ಮಾಡುತ್ತೇನೆ ಎಂದು ಹೇಳಿದರು. ಈ ಹೇಳಿಕೆ ಬಾಲಿವುಡ್ ಅಂಗಳದಲ್ಲಿ ಬಾರಿ ಸದ್ದು ಮಾಡಿತ್ತು. ಈ ಹೇಳಿಕೆಗಳು ಸೋನಾಕ್ಷಿ ಮನೆಯವರ ವಿರುದ್ಧವಾಗಿ ವಿವಾಹವಾಗುತ್ತಿದ್ದಾರೆ ಎಂಬ ಅನುಮಾನಗಳನ್ನು ಹುಟ್ಟುಹಾಕುತ್ತಿವೆ.
ಇದೀಗ ಸೋನಾಕ್ಷಿ ಹಾಗೂ ಜಹೀರ್ ಇಕ್ಬಾಲ್ ಇಬ್ಬರೂ ಹಸೆಮಣೆ ಏರಲಿದ್ದಾರೆ. ಈಗಾಗಲೇ ಮದುವೆ ಕಾರ್ಯಕ್ರಮಗಳು ಶುರುವಾಗಿದೆ. ಸೋನಾಕ್ಷಿ ಸಿನ್ಹಾ ಮದುವೆಯ ನಂತರ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿತ್ತು. ಇದೀಗ ಈ ಬಗ್ಗೆ ಜಹೀರ್ ಅವರ ತಂದೆ, ಉದ್ಯಮಿ ಇಟ್ಬಾಲ್ ರತ್ನಾಸಿ ಅವರು ಸ್ಪಷ್ಟನೆ ನೀಡಿದ್ದಾರೆ.
ಸೋನಾಕ್ಷಿ ಹಾಗೂ ಜಹೀರ್ ಇಕ್ಬಾಲ್ ಮದುವೆ ಸ್ಪೆಷಲ್ ಮ್ಯಾರೇಜ್ ಆಕ್ಟ್ ಅಡಿಯಲ್ಲಿ ನಡೆಯಲಿದೆ. ಸೋನಾಕ್ಷಿ ಮದುವೆ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವುದಿಲ್ಲ. ಈ ಮದುವೆ ಹಿಂದೂ ಅಥವಾ ಮುಸ್ಲಿಂ ಆಚರಣೆಗಳನ್ನು ಹೊಂದಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಇಕ್ಬಾಲ್ ಮದುವೆಯ ಆರತಕ್ಷತೆಯನ್ನು ಆಯೋಜಿಸಲಾಗಿದ್ದು, ನಟ ಸಲ್ಮಾನ್ ಖಾನ್, ಶಾರುಖ್ ಖಾನ್, ಹುಮಾ ಖುರೇಷಿ ಸೇರಿದಂತೆ ಹಲವಾರು ಖ್ಯಾತ ಸೆಲೆಬ್ರಿಟಿಗಳು ಭಾಗಿಯಾಗುವ ಸಾಧ್ಯತೆಯಿದೆ.