ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಮತ್ತು ರಣಬೀರ್ ಕಪೂರ್ ಅಭಿನಯದ ಅನಿಮಲ್ ಸಿನಿಮಾ ಕಳೆದ ವರ್ಷಾಂತ್ಯದಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಸುಮಾರು 900 ಕೋಟಿ ರೂಪಾಯಿ ಲೂಟಿ ಮಾಡಿತು. ನಾಯಕಿಯಾಗಿ ಕನ್ನಡತಿ ಹಾಗೂ ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಚಿತ್ರದ ಮೂಲಕ ರಾತ್ರೋರಾತ್ರಿ ಸ್ಟಾರ್ ಇಮೇಜ್ ಪಡೆದ ಮತ್ತೊಬ್ಬ ಚೆಲುವೆ ಅಂದರೆ ಅವರು ತೃಪ್ತಿ ದಿಮ್ರಿ. ಜೋಯಾ ಪಾತ್ರದಲ್ಲಿ ತಮ್ಮ ಬೋಲ್ಡ್ನೆಸ್ ಮೂಲಕ ಎಲ್ಲರನ್ನು ತಮ್ಮತ್ತ ಸೆಳೆದರು. ಕೇವಲ ಒಂದೇ ದೃಶ್ಯದಿಂದ ಪಡ್ಡೆ ಹುಡುಗರ ನಿದ್ದೆ ಕದ್ದರು. ತೃಪ್ತಿ ಅವರು ಈ ಹಿಂದೆ ಸಾಕಷ್ಟು ಸಿನಿಮಾ ಮಾಡಿದರೂ ಅನಿಮಲ್ ಸಿನಿಮಾದಿಂದ ಒಳ್ಳೆಯ ಕ್ರೇಜ್ ಸಿಕ್ಕಿದೆ. ಇದರೊಂದಿಗೆ ಸತತ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.
ಈ ಉತ್ತರಾಖಂಡ ಮೂಲದ ಬ್ಯೂಟಿ, ನಾಲ್ಕು ಪ್ರಾಜೆಕ್ಟ್ಗಳಲ್ಲಿ ಬಿಜಿಯಾಗಿದ್ದಾರೆ. ಅವುಗಳಲ್ಲಿ ಒಂದು ‘ಬ್ಯಾಡ್ ನ್ಯೂಸ್’ ಸಿನಿಮಾ. ವಿಕ್ಕಿ ಕೌಶಲ್ ಮತ್ತು ಆಮಿ ವಿರ್ಕ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಪೂರ್ಣ ಪ್ರಮಾಣದ ಕಾಮಿಡಿ ಎಂಟರ್ಟೈನರ್ ಸಿನಿಮಾ ಆಗಿದೆ. ಇತ್ತೀಚೆಗಷ್ಟೇ ಟ್ರೇಲರ್ ರಿಲೀಸ್ ಆಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬಾಲಿವುಡ್ನ ಪ್ರಮುಖ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್, ಲಿಯೋ ವಿದ್ಯಾ ಕಲೆಕ್ಟಿವ್ ಮತ್ತು ಅಮೆಜಾನ್ ಪ್ರೈಮ್ ಬ್ಯಾನರ್ನಡಿಯಲ್ಲಿ ಕರಣ್ ಜೋಹರ್, ಅಪೂರ್ವ ಮೋಡ್ತಾ, ಅಮೃತ್ ಪಾಲ್ ಸಿಂಗ್ ಬಿಂದ್ರಾ ಮತ್ತು ಆನಂದ್ ತಿವಾರಿ ನಿರ್ಮಿಸಿದ್ದಾರೆ. ಯುವ ನಿರ್ದೇಶಕ ಆನಂದ್ ತಿವಾರಿ ನಿರ್ದೇಶಕರು. ಈ ಚಿತ್ರ ಜುಲೈ 19 ರಂದು ಬಿಡುಗಡೆಯಾಗಲಿದೆ. ಸದ್ಯ ಚಿತ್ರತಂಡ ಪ್ರಚಾರ ಕಾರ್ಯ ಆರಂಭಿಸಿದೆ.
ಈಗಾಗಲೇ ಟ್ರೇಲರ್ ಬಿಡುಗಡೆಯಾಗಿದ್ದರೆ, ಇತ್ತೀಚೆಗೆ ಈ ಚಿತ್ರದ ಹಾಡು ಬಿಡುಗಡೆಯಾಗಿದೆ. ಜನಂ ಹಾಡು ಬಿಡುಗಡೆಯಾಗಿದ್ದು, ಅತಿ ಕಡಿಮೆ ಸಮಯದಲ್ಲಿ ಯೂಟ್ಯೂಬ್ನಲ್ಲಿ ಸಂಚಲನ ಮೂಡಿಸಿದೆ. ಈ ಹಾಡಿನಲ್ಲಿ ತೃಪ್ತಿ ದಿಮ್ಮಿ ಮತ್ತೊಮ್ಮೆ ತಮ್ಮ ಹಾಟ್ ಸೌಂದರ್ಯದಿಂದ ಮನಸೆಳೆದಿದ್ದಾರೆ. ಈ ಹಾಡು ಸಂಪೂರ್ಣ ರೊಮ್ಯಾಂಟಿಕ್ ಮೂಡ್ನಲ್ಲಿ ಸಾಗುತ್ತಿದೆ. ಅನಿಮಲ್ ಸಿನಿಮಾಗಿಂತ ನೂರು ಪಟ್ಟು ಹೆಚ್ಚು ಬೋಲ್ಡ್ ದೃಶ್ಯಗಳಿವೆ. ಇಡೀ ಹಾಡಿನಲ್ಲಿ ತೃಪ್ತಿ ಬಿಕಿನಿಯಲ್ಲೇ ಕಾಣಿಸಿಕೊಂಡಿದ್ದಾರೆ.