ಬೆಂಗಳೂರು: ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಬಿಗ್ ಬಾಸ್ ಖ್ಯಾತಿಯ ಚಂದನ ಶೆಟ್ಟಿ ಮತ್ತು ನಿವೇದಿತಾಗೌಡ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಕಳೆದ ನಾಲ್ಕು ವರ್ಷದಿಂದ ಒಟ್ಟಿಗೆ ಸಂಸಾರ ನಡೆಸುತ್ತಿದ್ದ ಬಿಗ್ಬಾಸ್ ಜೋಡಿ ಇದೀಗ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಜೂನ್ 6 ರಂದು ಚಂದನ ಶೆಟ್ಟಿ ಮತ್ತು ನಿವೇದಿತಾ ಗೌಡ ಶಾಂತಿ ನಗರದ ಫ್ಯಾಮಿಲಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು , ಇಂದು ಅರ್ಜಿ ವಿಚಾರಣೆಗಾಗಿ ಆಗಮಿಸಿದ್ದಾರೆ. ಕೋರ್ಟ್ ಗೆ ಇಬ್ಬರು ಕೈ ಕೈ ಹಿಡಿದುಕೊಂಡು ನಡೆದುಕೊಂಡು ಬಂದಿದ್ದಲ್ಲದೇ ನ್ಯಾಯಾಲಯದಲ್ಲಿ ಒಟ್ಟಿಗೆ ಒಂದೇ ಬೆಂಚಿನ ಮೇಲೆ ನಗುನಗುತ್ತ ಕುಳಿತುಕೊಂಡಿದ್ದಾರೆ.