ಕನ್ನಡ ಕಿರುತೆರೆಯಲ್ಲಿ ಕ್ಯೂಟ್ ಜೋಡಿ ಎನಿಸಿಕೊಂಡಿದ್ದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ. ವಿಚ್ಛೇದನ ಪಡೆದುಕೊಂಡಿದ್ದಾರೆ. ಪರಸ್ಪರ ಪ್ರೀತಿಸಿ ಮದುವೆಯಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಾಲ್ಕು ವರ್ಷಗಳ ಬಳಿಕ ದೂರಾಗಿದ್ದಾರೆ. ಇಬ್ಬರ ಒಪ್ಪಿಗೆಯ ಮೇರೆಗೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿಚ್ಛೇದನ ಪಡೆದಿದ್ದಾರೆ.
ಈ ಬಗ್ಗೆ ಚಂದನ್ ಶೆಟ್ಟಿ ಫಿಲ್ಮಿಬೀಟ್ ಜೊತೆ ಮಾತನಾಡಿದ್ದು, ಎಲ್ಲರಿಗೂ ಇರುವಂತೆ ನನಗೂ ಕನಸಿತ್ತು. ಒಳ್ಳೆ ಚೆನ್ನಾಗಿರುವ ಹುಡುಗಿ ಸಿಗಬೇಕು ಎನ್ನುವುದಿತ್ತು. ಅದೇ ರೀತಿ ಹುಡುಗಿ ಸಿಕ್ಕಿದ್ದರು ಆದರೆ ಕಾರಣಾಂತರದಿಂದ ಹೀಗಾಯ್ತು. ಲೈಫ್ ಅಂದರೆನೇ ಹಾಗೆ ಸಮುದ್ರ ತರಹ. ಕೆಲವು ಸಲ ಚಿಕ್ಕ ಅಲೆ ಬರುತ್ತದೆ. ಕೆಲವು ಸಹ ದೊಡ್ಡ ಅಲೆ ಬರುತ್ತದೆ. ಕೆಲವು ಸಲ ಸುನಾಮಿ ಬರುತ್ತದೆ. ಅದು ಯಾವಾಗ ಆಗುತ್ತದೆಯೋ..? ಹೇಗೆ ಆಗುತ್ತದೆಯೋ..? ಗೊತ್ತಾಗುವುದಿಲ್ಲ. ಪ್ರತಿಯೊಬ್ಬರ ಜೀವನದಲ್ಲೂ ನೋವು ಇದ್ದೆ ಇರುತ್ತದೆ. ಕೆಟ್ಟ ನೆನಪು ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿಯೂ ಇರುತ್ತದೆ. ಕೆಲವರು ಕೆಲವರನ್ನು ಕಳೆದುಕೊಳ್ಳುತ್ತಾರೆ. ಸಾವುಗಳಾಗುತ್ತದೆ ಅದು ಅವರಿಗೆ ಕೆಟ್ಟ ನೆನಪಾಗುತ್ತದೆ. ನನ್ನ ಜೀವನದಲ್ಲಿ ಇದು ಕೆಟ್ಟ ನೆನಪಾಗಿದೆ ಅಷ್ಟೇ ಎಂದು ಚಂದನ್ ಶೆಟ್ಟಿ ತಮ್ಮ ವಿಚ್ಛೇದನದ ಬಗ್ಗೆ ಹೇಳಿದ್ದಾರೆ.
ಲವ್ ಮಾಡುವಾಗ ಇಬ್ಬರು ಬೇರೆ ಬೇರೆ ಇರುತ್ತಾರೆ. ಅವರಿನ್ನು ಮದುವೆಯಾಗಿರುವುದಿಲ್ಲ. ಮದುವೆ ಎನ್ನುವುದೇ ಬೇರೆ. ಮದುವೆಯಾಗಿ ಒಂದೇ ರೂಮ್ನಲ್ಲಿ ಸಂಸಾರ ಮಾಡುತ್ತಾರಲ್ವಾ ಅದು ಬೇರೆನೆ. ಅದು ಮದುವೆಯಾದವರಿಗೆ ಮಾತ್ರ ಗೊತ್ತಿರುತ್ತದೆ. ಜೀವನದಲ್ಲಿ ಬೇರೆ ರೀತಿಯ ಸವಾಲುಗಳು ಇರುತ್ತದೆ. ಅದು ಅಷ್ಟು ಸುಲಭವಲ್ಲ. ಒಂದೇ ಇಂಡ್ರಸ್ಟಿಯಲ್ಲಿದ್ದಾಗ ಬ್ಯಾಲನ್ಸ್ ಆಗುವುದು ತುಂಬಾ ಕಷ್ಟ. ಜೀವನದಲ್ಲಿ ಖುಷಿಯಾಗಿರುವುದು ಮುಖ್ಯ. ಆ ಖುಷಿ ಇದೆಯಲ್ಲಾ. ಅದೇ ಉಳಿಬೇಕು ಕೊನೆಯವರೆಗೂ ಎಂದು ಹೇಳಿದ್ದಾರೆ.