ನಟಿ ಪವಿತ್ರಾ ಜಯರಾಮ್ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ರು. ಅದ್ರೆ ಈಗ ಪವಿತ್ರಾ ಜಯರಾಮ್ ಜೊತೆ ಸ್ನೇಹ ಹೊಂದಿದ್ದ ತೆಲುಗು ಕಿರುತೆರೆ ನಟ ಹಾಗೂ ಪವಿತ್ರಾ ಪ್ರಿಯಕರ ಚಂದು ಕೂಡ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪವಿತ್ರಾ ಜಯರಾಮ್ ಜೊತೆ ಚಂದು ಆಪ್ತವಾಗಿದ್ದರು. ಪವಿತ್ರಾ ನಿಧನದ ಬಳಿಕ ಚಂದು ತೀವ್ರ ದುಃಖದಲ್ಲಿದ್ರು ..ಈಗ ಹೈದರಾಬಾದ್ನ ಮಣಿಕೊಂಡದಲ್ಲಿರುವ ಮನೆಯಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ..
2015ರಲ್ಲಿ ಶಿಲ್ಪಾ ಅನ್ನುವವರನ್ನ ಪ್ರೀತಿಸಿ ಚಂದು ಮದುವೆ ಆಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ನಟಿ ಪವಿತ್ರಾ ಜಯರಾಮ್ ಮತ್ತು ಚಂದು ಪರಸ್ಪರ ಪ್ರೀತಿಸುತ್ತಿದ್ರು… ಚಂದು ಜೀವನದಲ್ಲಿ ಪವಿತ್ರಾ ಎಂಟ್ರಿ ಆದಮೇಲೆ ಶಿಲ್ಪ ಜೊತೆ ಪ್ರತೀ ದಿನ ಜಗಳವಾಡುತ್ತಿದ್ರು. ಡಿವೋರ್ಸ್ ಗಾಗಿ ಕಾಯ್ತಾಯಿದ್ರು. ಎರಡು ದಿನಗಳ ಹಿಂದೆ ತೆಲುಗು ಖಾಸಗಿ ವಾಹಿನಿಗೆ ಚಂದು ಸಂದರ್ಶನ ಕೊಟ್ಟಾಗ ಪವಿತ್ರಾ ಸಾವಿನಿಂದ ಬಹಳ ನೊಂದಿದ್ದೇನೆ. ಅವರ ಸಾವನ್ನ ತಡೆದುಕೊಳ್ಳುವ ಶಕ್ತಿ ನನಗೆ ಇಲ್ಲ ಅಂದಿದ್ರು. ಇದೀಗ ಪವಿತ್ರಾ ಸಾವಿನಿಂದ ಮನನೊಂದು ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ..