ಬಹುಭಾಷೆ ನಟಿ ಛಾಯಾ ಸಿಂಗ್, ಸದ್ಯ ಈಗ ಕನ್ನಡದ “ಅಮೃತಧಾರೆ” ಸೀರಿಯಲ್ ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ನಟ ಶಿವರಾಜಕುಮಾರ್ ಅವರ ಜೊತೆಯಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ ಛಾಯಾ ಸಿಂಗ್.
ಇವರು ಅನೇಕ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ಇವರ ತಾಯಿ ಚಮನಲತಾ ಅವರ ಮನೆಯಲ್ಲಿ ಕಳ್ಳತನವಾಗಿದೆ. ಇವರ ಮನೆಯಲ್ಲಿ ಕೆಲಸ ಮಾಡಿಕೊಂಡು ಇರುವ ಕೆಲಸದಾಕೆ ಉಷಾ ಕೈ ಚಳಕ ತೋರಿಸಿದ್ದಾಳೆ. ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯ ವೇಳೆ ಕಳ್ಳತನ ಮಾಡಿರೋದಾಗಿ ಒಪ್ಪಿಕೊಂಡಿದ್ದಾರೆ. ಕೆಲಸದ ವೇಳೆ, ಚಿನ್ನಭಾರಣ ದೋಚಿ ಏನೂ ಅರಿಯದ ಹಾಗೆ ವರ್ತಿಸಿದ್ದಾಳೆ. ಮನೆಯವರು ಪರಿಶೀಲಿಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. 66 ಗ್ರಾಂ ಚಿನ್ನ, 150 ಗ್ರಾಂ. ಬೆಳ್ಳಿ ಆಭರಣ ವಶಕ್ಕೆ ಪಡೆದಿದ್ದಾರೆ.