ಕಿಚ್ಚ ಸುದೀಪ್ ಮತ್ತು ಡಿ ಬಾಸ್ ದರ್ಶನ್ ಆತ್ಮೀಯ ಗೆಳೆಯರಾಗಿದ್ರು.. ನಂತರ ಅವರಿಬ್ಬರು ನಾನೊಂದು ತೀರ ನೀನೊಂದು ತೀರ ಅಂತ ದೂರಾಗಿದ್ದು ಎಲ್ಲಾ ಗೊತ್ತೇಯಿದೆ. ಈ ಕುಚಿಕು ಗೆಳೆಯರು ಮತ್ತೆ ಒಂದಾಗಬೇಕು ಅಂತ ಅಭಿಮಾನಿಗಳು ಕಾಯ್ತಾಯಿದ್ದಾರೆ. ಸಾರಥಿ ಸಿನಿಮಾ ಟೈಂ ನಲ್ಲಿ ಸುದೀಪ್ ಡಿ ಬಾಸ್ ತಮ್ಮ ದಿನಕರ್ ಗೆ ಧೈರ್ಯ ತುಂಬಿದ್ದನ್ನ ಈಗ ದಿನಕರ್ ನೆನಪಿಸಿಕೊಂಡಿದ್ದಾರೆ.
ಸಾರಥಿ’ ಸಿನಿಮಾ ಸಮಯದಲ್ಲಿ ದರ್ಶನ್ ಜೈಲಿನಲ್ಲಿ ಇದ್ದರು. ಕೌಟುಂಬಿಕ ಕಲಹದ ಕಾರಣದಿಂದ ನ್ಯಾಯಾಂಗ ಬಂಧನದಲ್ಲಿದ್ದರು. ಸಿನಿಮಾ ಬಿಡುಗಡೆ ಸಮಯದಲ್ಲಿ ಸಾಕಷ್ಟು ಸಮಸ್ಯೆ ಎದುರಾಗಿತ್ತು. ದಿನಕರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಹಾಗಾಗಿ ಅಣ್ಣ-ತಮ್ಮಂದಿಕ ಕಥೆ ಮುಗಿದೇ ಹೋಯ್ತು ಅಂತ ಇಡೀ ಗಾಂಧಿನಗರ ಮಾತಾಡಿಕೊಂಡಿತ್ತು. ಆದರೆ ಸಿನಿಮಾ ರಿಲೀಸ್ ಆದಾಗ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಿತ್ತು.
ನಿರ್ಮಾಪಕರು ಸಾಲ ಮಾಡಿ ಸಾರಥಿ ನಿರ್ಮಾಣ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದರು. ಸಿನಿಮಾ ರಿಲೀಸ್ ಮಾಡೋಕೆ ಐದಾರು ತಿಂಗಳು ತಡವಾಯ್ತು… ಮತ್ತೊಂದು ಕಡೆ ದರ್ಶನ್ ಜೈಲಿನಲ್ಲಿ ಇದ್ದರು. ಅಂತಹ ಹೊತ್ತಲ್ಲಿ ಸಿನಿಮಾ ರಿಲೀಸ್ ಮಾಡಬೇಕೋ ಬೇಡವೋ ಎನ್ನುವ ಗೊಂದಲ ಒಂದು ಕಡೆ. ಮತ್ತೊಂದು ಕಡೆ ಸಿನಿಮಾ ಬಿಡುಗಡೆ ಆದರೆ ತಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ನಿರ್ಮಾಪಕರು ಪಟ್ಟು ಹಿಡಿದರು. ಸಾರಥಿ ಸಿನಿಮಾಗೆ ಹೀಗೆ ಕರಿನೆರಳು ಆವರಿಸಿಕೊಂಡಿತ್ತು. ಸಿನಿಮಾ ಬಿಡುಗಡೆ ಗೊಂದಲದಲ್ಲಿ ಇದ್ದಾಗಲೇ ಕಿಚ್ಚ ಸುದೀಪ್ ಫೋನ್ ಮಾಡಿ ದಿನಕರ್ ತೂಗುದೀಪ ಅವರಿಗೆ ಧೈರ್ಯ ತುಂಬಿದ್ದರು. ಈ ವಿಚಾರವನ್ನ ಖುದ್ದು ದಿನಕರ್ ಅವರೇ ಸಂದರ್ಶನದಲ್ಲಿ ನೆನಪಿಕೊಂಡಿದ್ದಾರೆ. ಸುದೀಪ್ ಅಂದು ಏನು ಹೇಳಿದರು ಅನ್ನೋದನ್ನ ವಿವರಿಸಿದ್ದಾರೆ.
“ಸಾರಥಿ ಸಿನಿಮಾ ಬಿಡುಗಡೆಗೆ ಒಂದು ವಾರ ಇದ್ದಾಗ ಸುದೀಪ್ ಸರ್ ಫೋನ್ ಮಾಡಿದ್ದರು. ಜೀವನ ಹೀಗಾಗಿಬಿಡ್ತಲ್ಲ ಎಂದು ನಾನು ಬಹಳ ಕುಗ್ಗಿ ಹೋಗಿದ್ದೆ. ಆ ಸಮಯದಲ್ಲಿ ಸುದೀಪ್ ಸರ್ ಕರೆ ಮಾಡಿದ್ದರು. ನಾನು ಸುದೀಪ್ ಮಾತನಾಡೋದು ಅಂದ್ರು. ಒಂದಷ್ಟು ಹೊತ್ತು ಮಾತನಾಡಿ ಸುದೀಪ್ ಸರ್ ನನಗೆ ಧೈರ್ಯ ತುಂಬಿದರು. ಅವತ್ತು ಸುದೀಪ್ ಸರ್ ಕೊನೆಗೊಂದು ಮಾತು ಹೇಳಿದ್ರು. ಆ ಮಾತು ಇನ್ನು ನನಗೆ ನೆನಪಿದೆ. ನೋಡು ಇಡೀ ಇಂಡಸ್ಟ್ರಿ ಅಣ್ಣ-ತಮ್ಮಂದಿರ ಮೇಲೆ ಕಾಲಿಟ್ಟುಕೊಂಡು ನಿಂತುಬಿಟ್ಟಿದೆ ಈಗ ನೀವಿಬ್ಬರು ಶಕ್ತಿ ತಗೊಂಡು ಎದ್ದು ನಿಂತರೆ ಅವರೆಲ್ಲರೂ ಬ್ಯಾಲೆನ್ಸ್ ತಪ್ಪಿ ಬೀಳ್ತಾರೆ. ನೀವಿಬ್ಬರೇ ನಿಂತಿರ್ತೀರಾ. ಖಂಡಿತ ಒಳ್ಳೆಯದಾಗುತ್ತೆ ಎಂದು ಧೈರ್ಯ ತುಂಬಿದ್ದರು ಅಂತ ದಿನಕರ್ ನೆನೆಪಿಸಿಕೊಂಡಿದ್ದಾರೆ…
ದರ್ಶನ್ ಹಾಗೂ ಸುದೀಪ್ ದೂರವಾದ ಬಳಿಕವೂ ಕೂಡ ದಿನಕರ್ ಕಿಚ್ಚನ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಇಂದಿಗೂ ಕೂಡ ಕಿಚ್ಚನ ಜೊತೆ ದಿನಕರ್ ಆಗಾಗ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ಸಿಸಿಎಲ್ ಮತ್ತು ಕೆಸಿಸಿಯಲ್ಲೂ ಕೂಡ ಕಿಚ್ಚನ ಜೊತೆ ದಿನಕರ್ ತೊಡಗಿಸಿಕೊಂಡಿದ್ದಾರೆ…