ಟಾಲಿವುಡ್ ನಲ್ಲಿ ಮೆಗಾಸ್ಟಾರ್ ಎಂದೇ ಪ್ರಸಿದ್ದಿ ಆಗಿರುವ ಚಿರಂಜೀವಿ ಕೊನೆಡೇಲಾ ಅವರು 2 ಅತ್ಯುತ್ತಮ ಪ್ರಶಸ್ತಿಗಳನ್ನ ಮುಡಿಗೆರಿಸಿಕೊಂಡಿದ್ದಾರೆ. 2006 ರಲ್ಲಿ ಪದ್ಮ ಭೂಷಣ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಈಗ ಅಸಾಧಾರಣ ಸೇವೆ ಗುರುತಿಸಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿಯನ್ನು ಗುರುವಾರ ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಇದೇ ವಿಶೇಷ ಸಂದರ್ಭದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ ಕರ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಸೇರಿದಂತೆ ಗಣ್ಯಾತಿಗಣ್ಯರು ಹಾಜರಿದ್ದರು. ಚಿರಂಜೀವಿ ಅವರ ಫ್ಯಾಮಿಲಿ ಇವರ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಮೆಗಾ ಪವರ್ ಸ್ಟಾರ್ ಎಂದೇ ಖ್ಯಾತಿ ಪಡೆದ ರಾಮ್ ಚರಣ್ ಚಿರಂಜೀವಿ ಪುತ್ರ, ಅಪ್ಪನಿಗೆ ಮೇಕ್ಅಪ್ ಮಾಡಿದ್ದಾರೆ. ಪ್ರಶಸ್ತಿ ಸ್ವೀಕರಿಸುವ ಮುನ್ನ ರೆಡಿ ಆಗುವ ಸಂದರ್ಭದಲ್ಲಿ ಅಪ್ಪ ಚಿರಂಜೀವಿಗೆ ಮಗ ರಾಮ್ ಚರಣ್ ಬಣ್ಣ ಹಚ್ಚಿದ್ದಾರೆ. ಇದನ್ನ ಕುರಿತು ಉಪಾಸನ ಕೊನೆಡೇಲಾ ವಿಡಿಯೋ ಒಂದರನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.