ದೇಶದೆಲ್ಲೆಡೆ ಚುನಾವಣಾ ಭರಾಟೆ ಜೋರಾಗಿರುವ ಕಾರಣ ಬೆಳ್ಳಿತೆರೆ ಮೇಲೆ ಸಿನಿಮಾ ಆಟ ನಡೆಯುತ್ತಿಲ್ಲ. ಹೀಗಾಗಿ, ಬಹುತೇಕ ಫಿಲ್ಮ್ ಟೀಂ ಗಳು ತಮ್ಮ ಸಿನಿಮಾ ಬಿಡುಗಡೆನಾ ಮುಂದೂಡ್ತಿದ್ದಾರೆ. ಇದಕ್ಕೆ ಸ್ಯಾಂಡಲ್ ವುಡ್ ಅಧ್ಯಕ್ಷರ ಸಿನಿಮಾ ಕೂಡ ಹೊರತಾಗಿಲ್ಲ. ಕಾಮಿಡಿ ಕಿಂಗ್ ಶರಣ್ ನಟನೆಯ ಬಹುನಿರೀಕ್ಷಿತ ಚಿತ್ರ “ಛೂ ಮಂತರ್” ಇದೇ ಮೇ 10ಕ್ಕೆ ಬಿಡುಗಡೆ ಆಗಬೇಕಿತ್ತು. ಆದ್ರೀಗ ರಿಲೀಸ್ ಡೇಟ್ ಪೋಸ್ಟ್ ಫೋನ್ ಮಾಡಲಾಗಿದೆ.
ಚಿತ್ರವನ್ನು ವೀಕ್ಷಿಸಿರುವ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳ ವಿತರಕರು, ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ “ಹಾರಾರ್” ಚಿತ್ರವಾಗಿದ್ದು, ಉತ್ತಮವಾಗಿ ಮೂಡಿಬಂದಿದೆ ಎಲ್ಲಾ ಭಾಷೆಗಳ ಜನರು ನೋಡುವ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಈಗ ದೇಶಾದ್ಯಂತ ಚುನಾವಣೆ ಕೂಡ ನಡೆಯುತ್ತಿದೆ. ಹಾಗಾಗಿ, ಸರಿಯಾದ ಸಮಯ ನೋಡಿಕೊಂಡು ಚಿತ್ರ ಬಿಡುಗಡೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಈ ಕಾರಣಗಳಿಂದ ನಮ್ಮ ಚಿತ್ರವನ್ನು ಮೇ 10 ರಂದು ಬಿಡುಗಡೆ ಮಾಡುತ್ತಿಲ್ಲ. ಮುಂದಿನ ದಿನಾಂಕವನ್ನು ಸದ್ಯದಲ್ಲೇ ತಿಳಿಸುತ್ತವೆ ಎಂದು ನಿರ್ಮಾಪಕ ತರುಣ್ ಶಿವಪ್ಪ ತಿಳಿಸಿದ್ದಾರೆ.
ಈಗಾಗಲೇ ಟೀಸರ್, ಟ್ರೇಲರ್ ಮೂಲಕ ಜನಪ್ರಿಯವಾಗಿರುವ ಈ ಚಿತ್ರದ ತಾರಾಬಳಗದಲ್ಲಿ ಶರಣ್ , ಚಿಕ್ಕಣ್ಣ, ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಪ್ರಭು ಮುಂಡ್ಕರ್ ಮುಂತಾದವರಿದ್ದಾರೆ. ಅನುಪ್ ಕಟ್ಟುಕರನ್ ಛಾಯಾಗ್ರಹಣ ಹಾಗೂ ಚಂದನ್ ಶೆಟ್ಟಿ ಅವರ ಸಂಗೀತ ನಿರ್ದೇಶನವಿರುವ “ಛೂ ಮಂತರ್” ಚಿತ್ರಕ್ಕೆ ಅವಿನಾಶ್ ಬಸುತ್ಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ಜೊತೆಯಾಗಿ “ಛೂಮಂತರ್” ಗೆ ಬಂಡವಾಳ ಹೂಡಿದ್ದಾರೆ.