ಕನ್ನಡ ಚಿತ್ರರಂಗದ ಕೆಲ ನಿರ್ಮಾಪಕರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಉದ್ಯಮಕ್ಕೆ ಸಂಬಂಧಪಟ್ಟ ಕೆಲ ಗಣ್ಯರು ಒಂದು ಬಸ್ ಮಾಡ್ಕೊಂಡು ಗೋವಾಗೆ ಟ್ರಿಪ್ ಹೋಗಿದ್ದಾರೆ. ಹೋಗುವಾಗ ಎಲ್ಲವೂ ಸರಿಯಿತ್ತು, ಎಲ್ಲರು ಸರಿಯಿದ್ರು. ಆದರೆ, ಅಲ್ಲಿ ಹೋಗಿ ಹಿಬೀಸ್ ರೆಸಾರ್ಟ್ನಲ್ಲಿ ತಂಗಿದ್ಮೇಲೆ ನಿರ್ಮಾಪಕ ಎ ಗಣೇಶ್, ರಥಾವರ ಸಿನಿಮಾ ಖ್ಯಾತಿಯ ಮಂಜುನಾಥ್ ಮತ್ತು ಆರ್ಯ ಸತೀಶ್ ನಡುವೆ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಈ ವೇಳೆ ನಿರ್ಮಾಪಕ ಎ ಗಣೇಶ್ ಅವರ ತಲೆಗೆ ಪೆಟ್ಟು ಬಿದ್ದಿದೆ ಎನ್ನಲಾಗಿತ್ತು. ಇದೀಗ ಗ್ಯಾರಂಟಿ ನ್ಯೂಸ್ ಚಾನಲ್ ಗೆ ಫೋಟೋಸ್ ಲಭ್ಯವಾಗಿದೆ. ಎ ಗಣೇಶ್ ಅವರ ಹಣೆಗೆ ಬಲವಾದ ಪೆಟ್ಟು ಬಿದ್ದಿದ್ದು, 25 ಸ್ಟಿಚ್ ಗಳನ್ನ ಹಾಕಲಾಗಿದೆಯಂತೆ.
ಫಿಲ್ಮ್ ಚೇಂಬರ್ ಚುನಾವಣೆಗೆ ಸಂಬಂಧಪಟ್ಟಂತೆ ಮಾತುಕತೆ ನಡೆಯತ್ತಿದ್ದಾಗ ಮಾತಿಗೆ ಮಾತು ಬೆಳೆದು ತಾರಕಕ್ಕೇರಿ ಜಗಳ ನಡೆದಿರುವುದಾಗಿ ಸುದ್ದಿ ಕೇಳಿಬರ್ತಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾದರೂ ಮಾತಿನ ಚಕಮಕಿ ಜೋರಾಗಿ ಬಡಿದಾಡಿಕೊಂಡಿರುವುದಕ್ಕೆ ನಿರ್ಮಾಪಕ ಎ ಗಣೇಶ್ ಅವರ ಫೋಟೋ ಸಾಕ್ಷಿ ಎನ್ನಬಹುದು. ಅಂದ್ಹಾಗೇ, ನಿರ್ಮಾಪಕ ಎ ಗಣೇಶ್ ಮಾತ್ರವಲ್ಲದೇ ರಥಾವರ ಮಂಜುನಾಥ್, ಸತೀಶ್ ಆರ್ಯನ್ ಗೂ ಪೆಟ್ಟು ಬಿದ್ದಿದೆಯಂತೆ. ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ N M ಸುರೇಶ್ ಅವರ ತುಟಿಗೂ ಏಟು ಬಿದ್ದಿದೆಯಂತೆ.
ಅಷ್ಟಕ್ಕೂ, ಯಾವ ವಿಚಾರಕ್ಕೆ ಟ್ರಿಪ್ ಹೋದವರ ಮಧ್ಯೆ ಗಲಾಟೆ ಹೊತ್ತಿಕೊಳ್ತು. ಕೈ ಕೈ ಮಿಲಾಯಿಸಿಕೊಂಡು ಮುಖಮೂತಿ ಹೊಡೆದುಕೊಳ್ಳೋ ಥರ ಯಾಕೇ ಹೊಡೆದಾಡಿಕೊಂಡರು ಅನ್ನೋದಕ್ಕೆ ಉತ್ತರ ಸಿಗಬೇಕಿದೆ. ಗೋವಾ ಟ್ರಿಪ್ ನಲ್ಲಿ ಭಾಗಿಯಾದವರು ವಾಪಾಸ್ ಆದ್ಮೇಲೆ ಅಸಲಿಯತ್ತನ್ನ ಬಿಚ್ಚಿಡಬೇಕಿದೆ.