“ಜೈಲರ್” ನಂತಹ ಸೂಪರ್ ಹಿಟ್ ಸಿನಿಮಾವನ್ನು ನೀಡಿದ್ದ ಬಳಿಕ “ಸೂಪರ್ ಸ್ಟಾರ್” ರಜನಿಕಾಂತ್ ಅವರು “ವೆಟ್ಟೈಯನ್” ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಇದರ ನಡುವೆ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ಆ ಸಿನಿಮಾಗೆ “ಕೂಲಿ” ಅಂತ ಟೈಟಲ್ ಇಡಲಾಗಿದೆ. ಜೈಲರ್ ಸಿನಿಮಾ ನಿರ್ಮಿಸಿದ್ದ ಸನ್ ಪಿಕ್ಚರ್ಸ್ ಸಂಸ್ಥೆ “ಕೂಲಿ” ಸಿನಿಮಾಕ್ಕೂ ಬಂಡವಾಳ ಹಾಕಿದೆ.
ಕಾಲಿವುಡ್ನಲ್ಲಿ ಲಿಯೋ, ಮಾಸ್ಟರ್, ಖೈದಿ, ವಿಕ್ರಮ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಫೇಮಸ್ ಆಗಿರುವ ಲೋಕೇಶ್ ಕನಕರಾಜ್ ಅವರು ಈ ಬಾರಿ ರಜನಿಕಾಂತ್ ಜೊತೆಗೆ ಕೈಜೋಡಿಸಿದ್ದಾರೆ. ಈವರೆಗೂ ತಮ್ಮ ಸಿನಿಮ್ಯಾಟಿಕ್ ಯೂನಿವರ್ಸ್ಗಳಲ್ಲೇ ಸಿನಿಮಾ ಮಾಡುತ್ತಿದ್ದ ಲೋಕೇಶ್ ಕನಕರಾಜ್, ಈ ಬಾರಿ ಬೇರೆ ಥರದ ಸಿನಿಮಾ ಮಾಡಲು ಮುಂದಾಗಿದ್ದಾರೆ.
ರಜನಿಕಾಂತ್, ಲೋಕೇಶ್ ಕನಕರಾಜ್ ಕಾಂಬಿನೇಷನ್ “ಕೂಲಿ” ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ. ರಜನಿಕಾಂತ್ ಅವರು ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿರುವುದು ಅವರ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.