ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ನಂ.2 ಆಗಿ ಜೈಲು ಸೇರಿದ್ದ ನಟ ದರ್ಶನ್, ಬೇಲ್ ಪಡೆದು ಹೊರಬಂದಿದ್ದಾರೆ. ಸಂಕ್ರಾಂತಿ ಹಬ್ಬದಂದು ಇಡೀ ಕುಟುಂಬ ಸೇರಿ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಹಬ್ಬವನ್ನು ಬಹಳ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಸೆಲೆಬ್ರೇಟ್ ಮಾಡಿಕೊಂಡಿದ್ದರು. ಇನ್ನು ಡೆವಿಲ್ ಸಿನಿಮಾದ ಶೂಟಿಂಗ್ ಕಿಕ್ ಸ್ಟಾರ್ಟ್ ಆಗಲಿದೆ ಅನ್ನೋ ಮಾತು ಕೇಳಿಬಂದಿತ್ತು. ಜನವರಿ 1ರಂದು ಅದ್ರ ಡಬ್ಬಿಂಗ್ ಕಾರ್ಯಕ್ಕೂ ಚಾಲನೆ ನೀಡಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಇತ್ತೀಚೆಗೆ ಹರಡುತ್ತಿರೋ ಹೊಸ ವದಂತಿ ಏನಪ್ಪಾ ಅಂದ್ರೆ, ದರ್ಶನ್ ಡೆವಿಲ್ ಸಿನಿಮಾ ಮಾಡಲ್ಲವಂತೆ.
ಇದು ಬರೀ ಅಂತೆ ಕಂತೆ ಅಷ್ಟೇ. ಗ್ಯಾರಂಟಿ ನ್ಯೂಸ್ ಗೆ ಸಿಕ್ಕಿರೋ ಅಧಿಕೃತ ಮಾಹಿತಿ ಪ್ರಕಾರ ‘ಡೆವಿಲ್- ದಿ ಹೀರೋ’ ಮೂವಿ ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ. ಸುಪ್ರೀಂ ಕೋರ್ಟ್ ನಿಂದ ಒಂದು ಆದೇಶ ಬರಬೇಕಿದ್ದು, ಅದಕ್ಕಾಗಿ ಕಾಯ್ತಿರೋ ದರ್ಶನ್ ಅಂಡ್ ಟೀಂ, ಅದು ಬರ್ತಿದ್ದಂತೆ ಡೆವಿಲ್ ಶೂಟಿಂಗ್ ಶುಭಾರಂಭವಾಗಲಿದೆ. ಆದ್ರೆ ನಾವು ನೀವು ಕೇಳಲ್ಪಡುತ್ತಿರೋ ಕೆವಿಎನ್- ಜೋಗಿ ಪ್ರೇಮ್ ಕಾಂಬೋ ಸಿನಿಮಾದ ಅಡ್ವಾನ್ಸ್ ವಾಪಸ್ ನೀಡಿದ್ದಾರಂತೆ ದರ್ಶನ್. ಅಷ್ಟೇ ಅಲ್ಲ, ಕೋಟಿಗೊಬ್ಬ-3 ನಿರ್ಮಾಪಕ ಸೂರಪ್ಪ ಬಾಬು ನಟ ದರ್ಶನ್ ಜೊತೆ ಸಿನಿಮಾ ಮಾಡೋಕೆ ಅಡ್ವಾನ್ಸ್ ನೀಡಿದ್ದರು. ಅದೂ ಕೂಡ ವಾಪಸ್ ನೀಡಿದ್ದಾರಂತೆ ದಾಸ ದರ್ಶನ್. ಅದಕ್ಕೆ ಕಾರಣ ಅವರೊಟ್ಟಿಗೆ ಸಿನಿಮಾ ಮಾಡಲೇಬಾರದು ಅಂತಲ್ಲ. ಸದ್ಯ ನಟ ದರ್ಶನ್ ಅವರಿಗೆ ಕಾನೂನು ತೊಡಕಿದೆ. ಅಲ್ಲದೆ, ಸಾಕಷ್ಟು ಸಿನಿಮಾಗಳು ಲೈನಪ್ ಕೂಡ ಆಗಿವೆ. ಹಾಗಾಗಿ ಎಲ್ಲಾ ಅಂದುಕೊಂಡಂತೆ ಆದ್ರೆ ಇವರೊಟ್ಟಿಗೆ ಕೂಡ ಸಿನಿಮಾಗಳನ್ನ ಮಾಡ್ತಾರಂತೆ ಚಾಲೆಂಜಿಂಗ್ ಸ್ಟಾರ್.
ಎರಡು ಸಿನಿಮಾಗಳ ಅಡ್ವಾನ್ಸ್ ಹಣ ವಾಪಸ್ ಮಾಡಿದ್ದಾರೆ ಅಂದ ಮಾತ್ರಕ್ಕೆ ದರ್ಶನ್ ಕೈಯಲ್ಲಿ ಸಿನಿಮಾಗಳೇ ಇಲ್ಲ ಅಂತೇನಿಲ್ಲ. ಅವೆರಡರ ಹೊರತಾಗಿಯೂ ಒಂದಲ್ಲ ಎರಡಲ್ಲ ಬರೋಬ್ಬರಿ 4 ಸಿನಿಮಾಗಳು ದರ್ಶನ್ ಗಾಗಿ ಕಾದು ಕುಳಿತಿವೆ. ಹೌದು.. ಮೊದಲಿಗೆ ಡೆವಿಲ್ ಶುರುವಾಗಲಿದೆ. ಅದು ಮುಗಿಯೋದ್ರ ಒಳಗಾಗಿ ತೆಲುಗು ನಿರ್ಮಾಪಕರಿಗೆ ದರ್ಶನ್ ಕೊಟ್ಟಿರೋ ಕಮಿಟ್ಮೆಂಟ್ ನ ಮುಗಿಸಿಕೊಡಲಿದ್ದಾರಂತೆ.
ಆ ಪ್ರಾಜೆಕ್ಟ್ ಮುಗಿಯುತ್ತಿದ್ದಂತೆ ವೀರ ಸಿಂಧೂರ ಲಕ್ಷ್ಮಣ ಹಾಗೂ ದಿನಕರ್ ತೂಗುದೀಪ ಚಿತ್ರಗಳು ಒಟ್ಟೊಟ್ಟಿಗೆ ಚಿತ್ರೀಕರಣ ಶುರುವಾಗಲಿವೆ ಎನ್ನಲಾಗುತ್ತಿದೆ. ರಾಬರ್ಟ್ ಹಾಗೂ ಕಾಟೇರ ಚಿತ್ರಗಳ ನಿರ್ದೇಶಕ ತರುಣ್ ಸುಧೀರ್ ಸದ್ಯ ವೀರ ಸಿಂಧೂರ ಲಕ್ಷ್ಮಣ ಚಿತ್ರದ ಕಥೆಗೆ ಕೂರಲಿದ್ದು, ಅದು ಬ್ರಿಟಿಷರ ಕಾಲಘಟ್ಟದ ಕಥಾನಕವಾದ್ದರಿಂದ ಸೆಟ್ ಹಾಕೋಕೆ ದೊಡ್ಡ ಕಾಲಾವಕಾಶ ಬೇಕಾಗಲಿದೆ. ಹಾಗಾಗಿ ವೀರ ಸಿಂಧೂರ ಲಕ್ಷ್ಮಣ ಸೆಟ್ ವರ್ಕ್ ನಡೆಯೋವಾಗ ದಚ್ಚು ಸಹೋದರ ದಿನಕರ್ ಸಿನಿಮಾದ ಶೂಟಿಂಗ್ ನಡೆಯಲಿದೆ ಅನ್ನೋದು ಪಕ್ಕಾ ಆಗಿದೆ.
ಅದೇನೇ ಇರಲಿ.. ನಮ್ಮಲ್ಲಿ ಹೀರೋಗಳ ಕೊರತೆ ಕಾಡ್ತಿದೆ. ಅಪ್ಪು ಅಮರವಾದರು. ಶಿವಣ್ಣ ಅನಾರೋಗ್ಯಕ್ಕೆ ಜಾರಿದರು. ಯಶ್ ಇಂಟರ್ ನ್ಯಾಷನಲ್ ಲೆವೆಲ್ ಗೆ ಹೋಗಿಬಿಟ್ಟರು. ಇರೋದು ಎರಡ್ಮೂರು ಮಂದಿ ಅಂದ್ರೆ ಸುದೀಪ್, ದರ್ಶನ್ ಹಾಗೂ ಧ್ರುವ ಮೂವರೇ. ಹಾಗಾಗಿ ದರ್ಶನ್ ಮೊದಲಿನಂತೆ ಹಳೆಯ ಟ್ರ್ಯಾಕ್ ಗೆ ಮರಳಬೇಕಿದೆ. ಅವರಿಂದ ಚಿತ್ರರಂಗವನ್ನೇ ನಂಬಿ ಬದುಕ್ತಿರೋ ಲಕ್ಷಾಂತರ ಮಂದಿಗೆ ಅನ್ನ ಸಿಗಲಿದೆ. ಹಳೇ ಬೇರು, ಹೊಸ ಚಿಗುರು ಅನ್ನುವಂತೆ ಹಳೆಯ ದಿನಗಳು ಮರುಕಳಿಸಲಿ ಅಂತ ಇಡೀ ಚಿತ್ರರಂಗ ಕಾಯ್ತಿದೆ. ಆ ಕಾಯುವಿಕೆ ಸಫಲವಾಗಲಿ ಅನ್ನೋದು ನಮ್ಮ ಆಶಯ.
ಬೀರಗಾನಹಳ್ಳಿ ಲಕ್ಷ್ಮೀ ನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc