ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಮತ್ತೆ ಮೂವರಿಗೆ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಅದರಲ್ಲಿ ಮಾಜಿ ಉಪಮೇಯರ್ ಮೋಹನ್ ರಾಜ್ಗೆ ಎರಡನೇ ಬಾರಿ ನೋಟಿಸ್ ಜಾರಿಯಾಗಿದ್ದು ಬಸವೇಶ್ವರನಗರ ಪೊಲೀಸ್ ಠಾಣೆಗೆ ಖುದ್ದು ಹಾಜರಾಗುವಂತೆ ತಿಳಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಮೋಹನ್ ರಾಜ್ ರಿಂದ 40 ಲಕ್ಷ ಹಣ ಪಡೆದಿದ್ದ ಬಗ್ಗೆ ನಟ ದರ್ಶನ್ ಹೇಳಿದ್ದರು. ಯಾವ ಉದ್ದೇಶಕ್ಕಾಗಿ ಹಣ ನೀಡಿದ್ದಾರೆಂದು ತಿಳಿಯಲು ಪೊಲೀಸರು ನೋಟಿಸ್ ಕೊಟ್ಟಿದ್ದಾರೆ.
ಪ್ರಕರಣ ಸಂಬಂಧ ಆರೋಪಿ ಒಬ್ಬನಿಗೆ ಹಣಕಾಸಿನ ಸಹಾಯ ಮಾಡಿರೋ ಆರೋಪದಲ್ಲಿ ಪವಿತ್ರಾಗೌಡ ಸ್ನೇಹಿತೆ ಸಮತ ಹಾಗೂ ಬೆಂಗಳೂರಿನ ಬಿಜೆಪಿ ಶಾಸಕನ ಕಾರು ಚಾಲಕ ಕಾರ್ತಿಕ್ ಪುರೋಹಿತ್ಗೂ ನೊಟೀಸ್ ಜಾರಿ ಮಾಡಲಾಗಿದೆ, ರೇಣುಕಾಸ್ವಾಮಿ ಹತ್ಯೆ ಕೇಸ್ ಆರೋಪಿ ಪ್ರದೋಷ್ಗೆ ಆಪ್ತನಾಗಿರೋ ಕಾರ್ತಿಕ್ ಈಗ ಎಸ್ಕೇಪ್ ಆಗಿದ್ದಾನೆ.