ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ರನ್ನು ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ಭೇಟಿ ಮಾಡಿ ಮಾತನಾಡಿದ್ದಾರೆ. ಈ ವೇಳೆ ಜೈಲಿನಲ್ಲಿ ಅಪ್ಪನ ಸ್ಥಿತಿ ಕಂಡು ಮಗ ವಿನೀಶ್ ಕಣ್ಣೀರು ಹಾಕಿದ್ದಾನೆ. ಮಗನನ್ನು ಅಪ್ಪಿಕೊಂಡು ದರ್ಶನ್ ಸಮಾಧಾನ ಹೇಳಿದ್ದಾರಂತೆ. ಇನ್ನು ನಟ ಧನ್ವೀರ್ ಕೂಡ ಇಂದು ಜೈಲಿಗೆ ಭೇಟಿ ನೀಡಿ ದರ್ಶನ್ ಜೊತೆ ಮಾತನಾಡಿದ್ದಾರೆ. ಕಳೆದ ಬಾರಿ ಜೈಲಿಗೆ ಬಂದಿದ್ದ ಧನ್ವೀರ್ಗೆ ದರ್ಶನ್ ಭೇಟಿ ಸಾಧ್ಯವಾಗಿರಲಿಲ್ಲ. ಇಂದು ಮತ್ತೆ ಜೈಲಾಧಿಕಾರಿಗಳ ಅನುಮತಿ ಪಡೆದು ದರ್ಶನ್ ಭೇಟಿ ಮಾಡಿದ ಧನ್ವೀರ್, ದರ್ಶನ್ ಯಾವಾಗ್ಲೂ ನಮಗೆ ಅಣ್ಣನೇ ಎಂದು ಹೇಳಿದ್ದಾರೆ. ಇನ್ನು ಜೈಲಿನಲ್ಲಿ ವಕೀಲ ನಾರಾಯಣಸ್ವಾಮಿ ಅವರನ್ನು ಭೇಟಿ ಮಾಡಿರುವ ದರ್ಶನ್ ಮತ್ತು ಪವಿತ್ರಾ ಗೌಡ ಮುಂದಿನ ಲೀಗಲ್ ಪ್ರೊಸಿಜರ್ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರಂತೆ. ಜಾಮೀನು ಪಡೆಯುವ ಬಗ್ಗೆ ಹಾಗೂ ಮನೆಯಿಂದ ಊಟ ತರಿಸಿಕೊಳ್ಳುವ ಸಂಬಂಧ ವಕೀಲರ ಜೊತೆ ದರ್ಶನ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.