ರೇಣುಕಾಸ್ವಾಮಿ ಕೇಸ್ನಲ್ಲಿ ಬಂಧನದಲ್ಲಿರುವ ನಟ ದರ್ಶನ್ ಅವರು ಬಳ್ಳಾರಿ ಜೈಲಿನಿಂದಲೇ ತಮ್ಮ ಪ್ರೀತಿಯ ಸೆಲೆಬ್ರಿಟಿಗಳಿಗೆ ಸಂದೇಶ ಕೊಟ್ಟಿದ್ದಾರೆ. ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿ ಅಂತಾನೇ ಕರೆಯುತ್ತಾರೆ. ಇಂದು ಬಳ್ಳಾರಿ ಜೈಲಿಗೆ ಸ್ನೇಹಿತರು ಭೇಟಿ ಕೊಡಲು ಬಂದಾಗ ಜೈಲಿನ ಬಳಿ ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಗೆ ದರ್ಶನ್ ಕೈ ಸನ್ನೆ ಮಾಡಿದ್ದಾರೆ. ಬೆನ್ನು ನೋವಿನ ನಡುವೆಯೂ ನಗು ನಗುತ್ತಾ ಅಭಿಮಾನಿಗಳಿಗೆ ಅವರು ಸಿಗ್ನಲ್ ಕೊಟ್ಟಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರನ್ನು ಭೇಟಿ ಮಾಡಲು ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ನಿರ್ಮಾಪಕರು ಶೈಲಜಾ ನಾಗ್ ಹಾಗೂ ಸ್ನೇಹಿತರು ಭೇಟಿ ಮಾಡಲು ಬಂದಿದ್ದರು. ಈ ವೇಳೆ ದರ್ಶನ್ ಅವರನ್ನು ನೋಡಲು ಜೈಲಿನ ಹೊರಗೆ ಅಭಿಮಾನಿಗಳು ನೆರೆದಿದ್ದರು. ಸೆಲ್ನಿಂದ ದರ್ಶನ್ ಹೊರಗೆ ಬರುತ್ತಿದ್ದಂತೆಯೇ ಫ್ಯಾನ್ಸ್ ಜೈಕಾರ ಹಾಕಲು ಶುರು ಮಾಡಿದರು. ಅಭಿಮಾನಿಗಳ ಘೋಷಣೆ ಕೇಳಿ ಖುಷ್ ಆದ ದರ್ಶನ್ ಅವರು ಅಭಿಮಾನಿಗಳ ಘೋಷಣೆಗೆ ಕೈಸನ್ನೆ ಮಾಡಿ ಡೋಂಟ್ ವರಿ ‘ಸದ್ಯದಲ್ಲೇ ನಾನು ನಿಮಗಾಗಿ ಖಂಡಿತಾ ಹೊರಗೆ ಬರುತ್ತೇನೆ’ ಎಂಬ ರೀತಿಯಲ್ಲಿತ್ತು ಅವರ ಸಿಗ್ನಲ್ ಕೊಟ್ಟಿದ್ದಾರೆ.