ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದ ಚಾರ್ಜ್ಶೀಟ್ ಸಲ್ಲಿಕೆ ಆಗಿದೆ. ಚಾರ್ಜ್ಶೀಟ್ನಲ್ಲಿ ದರ್ಶನ್ ನೀಡಿದ ಸ್ವಇಚ್ಛಾ ಹೇಳಿಕೆ ಇದೆ. ಈ ಕೇಸ್ನಲ್ಲಿ ಎ2 ಆಗಿರುವ ದರ್ಶನ್ ವಿರುದ್ಧ ಪೊಲೀಸರಿಗೆ ಹಲವು ಸಾಕ್ಷಿಗಳು ಸಿಕ್ಕಿವೆ. ದರ್ಶನ್ ಸ್ನೇಹಿತೆ ಪವಿತ್ರ ಗೌಡಗೆ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದಕ್ಕೆ ಇಷ್ಟೇಲ್ಲಾ ದುರಂತ ನಡೆದು ಹೋಗಿದೆ. ತನಿಖೆ ವೇಳೆ ದರ್ಶನ್ ನೀಡಿದ ಹೇಳಿಯಲ್ಲಿ ಅನೇಕ ಶಾಕಿಂಗ್ ಸಂಗತಿಗಳು ತಿಳಿದುಬಂದಿವೆ.
ನಾನು ರಾಜರಾಜೇಶ್ವರಿನಗರದಲ್ಲಿ ಸ್ವಂತ ಮನೆಯಲ್ಲಿ ವಾಸವಾಗಿದ್ದು, ಚಿತ್ರನಟನಾಗಿ ಮತ್ತು ಇತರೆ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುತ್ತೇನೆ. 2011ರ ಸೆ. 9 ರಂದು ನನ್ನ ಪತ್ನಿ ವಿಜಯಲಕ್ಷ್ಮೀ ದೂರು ನೀಡಿದ್ದರು. ನನ್ನ ವಿರುದ್ಧ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನಂತೆ ಮೊ.ಸಂ: 425/2011 ಐಪಿಸಿ ಸೆಕ್ಷನ್ 498ಎ, 355,307, 323, 5060 ಕೇಸ್ ದಾಖಲಾಗಿ ಖುಲಾಸೆಯಾಗಿರುತ್ತದೆ. ನಾನು , ನನ್ನ ಪತ್ನಿ, ಮಗ ಹೊಸಕೆರೆಹಳ್ಳಿ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದೇವೆ.
‘ನನ್ನ ಪತ್ನಿ ಗೃಹಿಣಿ, ಮಗ 10ನೇ ತರಗತಿ ವ್ಯಾಸಂಗ ಮಾಡುತ್ತಿರುತ್ತಾನೆ. ನಾನು, ವಿಜಯಲಕ್ಷ್ಮೀ ಮದುವೆಯಾಗಿ 22 ವರ್ಷವಾಗಿದ್ದು, ಪವಿತ್ರಾಗೌಡ 10 ವರ್ಷಗಳಿಂದ ಲೀವ್ಇನ್ ರಿಲೇಷನ್ಶಿಪ್ನಲ್ಲಿದ್ದು ಪವಿತ್ರಾಗೌಡ ನನ್ನ ಮನೆಯಿಂದ ಒಂದೂವರೆ ಕಿ.ಮೀ. ದೂರದಲ್ಲಿರುತ್ತಾರೆ. ಪವನ್ ಮನೆ ನೋಡಿಕೊಳ್ಳುವ ಕೆಲಸ ಮಾಡಿಕೊಂಡಿರುತ್ತಾನೆ. ನಂದೀಶ್ ಎಂಬುವನು ನನ್ನ ಅಭಿಮಾನಿ, ಆತನ ಪರಿಚಯವಿದೆ.’
ಲಕ್ಷ್ಮಣ ನನ್ನ ಬಳಿ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾರೆ. ವಿನಯ್ ಸುಮಾರು 3-4 ವರ್ಷಗಳಿಂದ ನನಗೆ ಪರಿಚಯ ಇದೆ. ವಿನಯ್ ಆಗಾಗ ನಮ್ಮ ಮನೆಗೆ ಬಂದು ಹೋಗುತ್ತಿರುತ್ತಾರೆಸ. ನಾಗರಾಜ್ ಮೈಸೂರಿನ ನನ್ನ ಫಾರ್ಮ್ಹೌಸ್ ನೋಡಿಕೊಳ್ತಿದ್ದರು. ಪ್ರದೋಶ್ ನನಗೆ ಸುಮಾರು 16 ವರ್ಷಗಳಿಂದ ಪರಿಚಯವಿದೆ. ಪ್ರದೋಶ್ ಆಗಾಗ ನನ್ನ ಮನೆಗೆ ಬಂದು ಹೋಗುತ್ತಿರುತ್ತಾನೆ. ಚಿತ್ರದುರ್ಗದ ರಾಘವೇಂದ್ರ ನನ್ನ ಅಭಿಮಾನಿಯಾಗಿದ್ದು, ಚಿತ್ರದುರ್ಗದಲ್ಲಿ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷನಾಗಿರುತ್ತಾನೆ ಎಂದು ರೇಣೂಕಾಸ್ವಾಮಿ ಕೊಲೆ ಪ್ರಕರಣದ ಎ2 ದರ್ಶನ್ ಸ್ವಚ್ಛಾ ಹೇಳಿಕೆ ನೀಡಿದ್ದಾರೆ.