ಪವಿತ್ರಾ ಗೌಡ ಜತೆ 10 ವರ್ಷಗಳಿಂದ ಲಿವ್-ಇನ್ ರಿಲೇಷನ್ಶಿಪ್ನಲ್ಲಿ ಇರೋದಾಗಿ ನಟ ದರ್ಶನ್ ಒಪ್ಪಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೇಸ್ ಸಂಬಂಧ ಕೋರ್ಟ್ಗೆ ಸಲ್ಲಿಕೆಯಾದ ಚಾರ್ಜ್ಶೀಟ್ ಪ್ರತಿಯಲ್ಲಿ ದರ್ಶನ್ ಪವಿತ್ರಾ ಗೌಡ ಜೊತೆಗಿನ ಸಂಬಂಧದ ಹೀಗೆ ಹೇಳಿಕೆ ನೀಡಿದ್ದಾರೆ.
ಪವಿತ್ರಾಗೌಡ ಜೊತೆ 10 ವರ್ಷಗಳಿಂದ ನಾನು ಲೀವ್-ಇನ್ ರಿಲೇಷನ್ಷಿಪ್ನಲ್ಲಿ ಇದ್ದೇನೆ. ಆರ್.ಆರ್ ನಗರದಲ್ಲಿ ನನ್ನ ಮನೆಯಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಪವಿತ್ರಾ ಗೌಡ ನೆಲೆಸಿದ್ದಾರೆ ಎಂದರು.
ನನಗೆ ಸೌಂದರ್ಯ ಜಗದೀಶ್ ಸುಮಾರು 10 ವರ್ಷಗಳಿಂದ ಪರಿಚಯ. 2018 ರಲ್ಲಿ ನಾನು ಸೌಂದರ್ಯ ಜಗದೀಶ್ ನಡೆಯಿಂದ 1.75 ಕೋಟಿ ರೂ. ಸಾಲ ಪಡೆದು ಪವಿತ್ರಾ ಗೌಡಗೆ ಮನೆ ಖರೀದಿ ಮಾಡಿಕೊಟ್ಟೆ. ಈ ಹಣವನ್ನು ನಾನು ಪವಿತ್ರಾ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡಿದ್ದೆ. 2 ವರ್ಷದ ಹಿಂದೆಯೇ ಈ ಸಾಲವನ್ನು ತೀರಿಸಿದ್ದೇನೆ ಎಂದರು ದರ್ಶನ್.