- ವಿಷ್ಣುವಿನ ತಾಳ್ಮೆಯಿರಲಿ ಆದರೆ ನರಸಿಂಹನ ಕೋಪ ಯಾವತ್ತೂ ಮರಿಬೇಡ
- ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡ ಉಮಾಪತಿ
ರಾಜ್ಯದಲ್ಲಿ ದರ್ಶನ್ ಪ್ರಕರಣ ಭಾರೀ ಸದ್ದು ಮಾಡ್ತಿದೆ. ರಾಬರ್ಟ್ ಸಿನಿಮಾ ಬಳಿಕ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ನಡುವೆ ಘರ್ಷಣೆ ಉಂಟಾಗಿತ್ತು. ದರ್ಶನ್ ಮಾಧ್ಯಮ ಮುಂದೆ ಪ್ರತಿಕ್ರಿಯಿಸುವಾಗ ಉಮಾಪತಿ ಗೌಡಗೆ ತಗಡು ಎಂದು ಹೇಳಿದ್ದರು. ಅದಕ್ಕೆ ಉಮಾಪತಿ ಗೌಡ ಇಂದು ತಗಡಾಗಿರುವವನು ಮುಂದೊಂದು ದಿನ ಚಿನ್ನದ ತಗಡಾಗಬಹುದು ಎಂದು ಪ್ರತ್ಯುತ್ತರ ನೀಡಿದ್ದರು.
ಇದೀಗ ರೇಣುಕಾಸ್ವಾಮಿ ಪ್ರಕರಣದ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಗೌಡರವರು ವಿಡಿಯೋ ಹಂಚಿಕೊಳ್ಳುವ ಮೂಲಕ ದರ್ಶನ್ಗೆ ಟಾಂಗ್ ಕೊಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಉಮಾಪತಿ ಗೌಡ “ತಾಳ್ಮೆ ಕೆಲವೊಮ್ಮೆ ಶಕ್ತಿ” ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆ ಮೂಲಕ ತಗಡು ಯಾರು ಗೊತೈತಾ, ಎಂದು ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆದ ಬಳಿಕ ಅವರ ಹಳೆಯ ಹೇಳಿಕೆಗಳು, ಡೈಲಾಗ್ಗಳು ಟ್ರೋಲ್ ಆಗುತ್ತಿದೆ. ಜೊತೆಗೆ ಉಮಾಪತಿ ಪರವಾಗಿ ಹಲವು ಮೀಮ್ಸ್ ವೈರಲ್ ಆಗಿವೆ. ಸದ್ಯ ಮೀಮ್ಸ್ ಗಳನ್ನು ಉಮಾಪತಿ ಗೌಡ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.