ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಇತರೆ 17 ಆರೋಪಿಗಳು ಜೈಲು ಪಾಲಾಗಿದ್ದಾರೆ. ಈ ನಡುವೆ ದರ್ಶನ್ & ಗ್ಯಾಂಗ್ಗೆ ಎರಡು ಪೆನ್ಡ್ರೈವ್ಗಳ ಕಂಟಕ ಶುರುವಾದಂತಿದೆ. 8 ಜಿಬಿಯ 2 ಪೆನ್ಡ್ರೈವ್ಗಳನ್ನ ಸಿದ್ಧಪಡಿಸಿರೋ ಪೊಲೀಸರು ಆರೋಪಿಗಳ ಗೂಗಲ್ ಟೈಮ್ ಲೈನ್ ಡಾಟಾ ಸಂಗ್ರಹ ಮಾಡಿದ್ದಾರೆ ಎನ್ನಲಾಗಿದೆ. ಶಾಸಕರ ಸಂಬಂಧಿ ದೀಪಕ್, ದರ್ಶನ್ ಮನೆಯ ಕೆಲಸದವ ನಂದೀಶ್, ಇಬ್ಬರ ಮೊಬೈಲ್ನಲ್ಲೂ ಗೂಗಲ್ ಟೈಮ್ ಲೈನ್ ಇರುವ ಮಾಹಿತಿ ಸಿಕ್ಕಿದೆ. ಅಪರಾಧ ನಡೆದ ಪ್ರತಿ ಜಾಗದಲ್ಲೂ ಇಬ್ಬರು ಓಡಾಡಿದ್ದರು ಮತ್ತು ಘಟನಾ ಸ್ಥಳದಲ್ಲಿ ಇದ್ದರು ಎನ್ನುವುದಕ್ಕೆ ಮಹತ್ವದ ಸಾಕ್ಷಿ ಸಿಕ್ಕಂತಾಗಿದೆ.