ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಮೌನವಾಗಿದ್ದ ತರುಣ್ ಸುಧೀರ್ ಅವರು ಈಗ ಗ್ಯಾರಂಟಿ ನ್ಯೂಸ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ ತರುಣ್, ದರ್ಶನ್ ಅವ್ರಿಗೂ ದೊಡ್ಡ ಕುಟುಂಬ ಇದೆ, ಅವ್ರನ್ನ ನಂಬಿ ಸಾವಿರಾರು ಜನ ಬದುಕ್ತಿದ್ದಾರೆ, ನನ್ನ ಅಣ್ಣ ಇದ್ರಲ್ಲಿ ಭಾಗಿಯಾಗಿರೋದು ಸುಳ್ಳಾಗ್ಲಿ ಅನ್ನೋದು ನನ್ನ ಆಸೆ, ನಮ್ಮ ಇಡೀ ಕುಟುಂಬಕ್ಕೆ ಅವರೊಟ್ಟಿಗಿನ ಒಡನಾಟ ದೊಡ್ಡದು, ಅವ್ರು ಯಾವುದೇ ಪರಿಸ್ಥಿತಿಯಲ್ಲಿ ಇದ್ರೂ, ನಾನು ಅವ್ರಿಗೆ ಸಿನಿಮಾ ಮಾಡ್ತೀನಿ ಅಂತ ಭಾವುಕರಾದ್ರು.