ಈ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿನಾ ಡಿಬಾಸ್ ದಂಪತಿ ದುಬೈನಲ್ಲಿ ಸೆಲಬ್ರೇಟ್ ಮಾಡ್ಕೊಂಡಿದ್ದಾರೆ. ಅಲ್ಲಿನ ಫ್ಯಾನ್ಸ್ ಡಿಬಾಸ್ ದಂಪತಿಗೆ ಸರ್ ಪ್ರೈಸ್ ಕೊಟ್ಟಿದ್ದಾರೆ. ರೆಸ್ಟೋರೆಂಟ್ ವೊಂದರಲ್ಲಿ ಕೇಕ್ ಕಟ್ ಮಾಡಿ ಅಭಿಮಾನಿಗಳ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. ಈ ವೇಳೆ ಫ್ಯಾನ್ಸ್ ಗೆ ದಚ್ಚು ಫೋಟೋಗೆ ಫೋಸ್ ಕೊಟ್ಟಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಇದೆ ಸಮಯದಲ್ಲಿ ಪವಿತ್ರಾ ಗೌಡ ಹಾಗೂ ವಿಜಯಲಕ್ಷ್ಮಿ ಮಧ್ಯೆ ಕಿತ್ತಾಟ ನಡೆದಿದ್ದು, ಗುಟ್ಟಾಗಿ ಏನು ಉಳಿದಿಲ್ಲ. ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಓಪನ್ ಆಗಿಯೇ ಕಿತ್ತಾಡಿಕೊಂಡಿದ್ದರು. ಈಗ ದುಬೈನಲ್ಲಿ ದರ್ಶನ್ ಅವರು ವಿಜಯಲಕ್ಷ್ಮಿಗೆ ಹೂಗುಚ್ಛ ಕೊಡುತ್ತಿರುವ ಫೋಟೋ ಒಂದನ್ನ ವಿಜಯಲಕ್ಷ್ಮಿ ಸ್ಟೇಟಸ್ನಲ್ಲಿ ಪೋಸ್ಟ್ ಮಾಡಿದ್ದರು.
ಈ ಬೆನ್ನಲ್ಲೇ ದರ್ಶನ್ ಅವರು ಹೇಳಿದ್ದ ಕರ್ಮದ ಸಾಲುಗಳನ್ನು ಪವಿತ್ರಾ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿದ್ದಾರೆ. “ಕರ್ಮ” ಅನ್ನೋದು ಹೊರೆ ಇದ್ದಂತೆ. ಸಣ್ಣವರಿದ್ದಾಗ ಹಿರಿಯರು ಹೇಳ್ತಿದ್ರು. ಹೀಗೆಲ್ಲ ಮಾಡ್ತಿದ್ದೀಯಾ ಅದು ಮುಂದಿನ ಜನ್ಮಕ್ಕೆ ಕ್ಯಾರಿ ಆಗುತ್ತದೆ ಎನ್ನುತ್ತಿದ್ದರು. ಈಗ ಹಾಗಿಲ್ಲ, ಅಲ್ಲೇ ಡ್ರಾ, ಅಲ್ಲೇ ಬಹುಮಾನ’ ಎಂದು ದರ್ಶನ್ ಸಂದರ್ಶನದಲ್ಲಿ ಹೇಳಿದ್ದರು. ಈ ವಿಡಿಯೋನ ಸ್ಟೇಟಸ್ನಲ್ಲಿ ಹಾಕಿದ್ದಾರೆ ಪವಿತ್ರಾ.