ನಟಿ ದೀಪಿಕಾ ದಾಸ್ ಅವರಿಗೆ ದೀಪಕ್ ಎಂಬುವವರ ಜೊತೆ ಇತ್ತೀಚೆಗಷ್ಟೆ ಮದುವೆ ಆಗಿದ್ರು. ಸದ್ಯ ವಿದೇಶದಲ್ಲಿರುವ ದೀಪಿಕಾ ದಾಸ್ ಸಖತ್ ಮೋಜು ಮಸ್ತಿ ಮಾಡ್ತಿದ್ದಾರೆ… ಪತಿ ದೀಪಕ್ ಜೊತೆ ಅವರು ಫಾರಿನ್ ನಲ್ಲಿ ರೌಂಡ್ಸ್ ಹಾಕ್ತಿರೋ ದೀಪಿಕಾ ದಾಸ್, ಈಗ ಫೋಟೋಸ್ ಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋಸ್ ನೋಡಿದ ನೆಟ್ಟಿಗರಂತೂ ಫುಲ್ ಫಿದಾ ಆಗಿದ್ದಾರೆ. ಲೈಕ್ಸ್ಗಳ ಸುರಿಮಳೆಯನ್ನೇ ಮಾಡುತ್ತಿದ್ದಾರೆ.
ದೀಪಕ್ ಜೊತೆ ದೀಪಿಕಾ ದಾಸ್ ಅವರು ಮಸ್ತ್ ಆಗಿ ಪೋಸ್ ಕೊಟ್ಟಿದ್ದಾರೆ. ಸಮುದ್ರ ತೀರದಲ್ಲಿ ಅವರು ಹಾಯಾಗಿ ಸಖತ್ ರೊಮ್ಯಾಂಟಿಕ್ ಆಗಿ ಸಮಯ ಕಳೆದಿದ್ದಾರೆ. ಇನ್ನೂ ಇದಕ್ಕೆ ನೆಗೆಟಿವ್ ಕಮೆಂಟ್ಗಳು ಬರುತ್ತಿದ್ದು, ‘ಮೊನ್ನೆ ಮೊನ್ನೆ ಮದುವೆ ಆಗಿದೆ. ತಾಳಿ ಕಾಣಿಸುತ್ತಿಲ್ಲ. ಯಾವ ದೇಶಕ್ಕೆ ಹೋದರು ನಮ್ಮ ದೇಶದ ಸಂಸ್ಕೃತಿ ಮರೀಬೇಡಿ’ಎಂದು ಕೆಲವರು ಕಮೆಂಟ್ ಮಾಡಿ ಕಿಡಿಕಾರಿದ್ದಾರೆ.
ಮೊದಲಿನಿಂದಲೂ ದೇಶಗಳನ್ನು ಸುತ್ತಬೇಕು ಎನ್ನುವ ಆಸೆ ದೀಪಿಕಾ ದಾಸ್ಗೆ ಇತ್ತು. ಮದುವೆ ಆದ ಬಳಿಕ ಒಂದೊಂದೇ ದೇಶವನ್ನು ಅವರು ಸುತ್ತಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೀಪಿಕಾ ರೌಂಡ್ಸ್ ಒಡೆಯೋ ಸಾಧ್ಯತೆಗಳು ದಟ್ಟವಾಗಿದೆ. ಈಗಾಗಲೇ ಪ್ಲಾನ್ ಕೂಡ ರೆಡಿ ಅಂತೆ.