ಯಂಗ್ ಟೈಗರ್ ಜೂನಿಯರ್ ಎನ್ ಟಿ ಆರ್ ಸುಮಾರು 10,000 ಜನರ ಜೊತೆ ಸಮುದ್ರದ ದಡದಲ್ಲಿ ಫೈಟ್ ಮಾಡಿರುವ ಸುದ್ದಿ ಹೊರಬಿದ್ದಿದೆ. ಈ ಸುದ್ದಿ ಕೇಳಿ ಶಾಕ್ ಆಗೋದು ಸತ್ಯ. ಆದರೆ ಇದು ದೇವರ ಚಿತ್ರಕ್ಕಾಗಿ ನಡೆದ ರೀಲ್ ಫೈಟ್ ಅನ್ನೋದು ಗಮನಿಸಬೇಕಾದ ವಿಚಾರ.
ದೇವರ ಯಂಗ್ ಟೈಗರ್ ಅಭಿನಯದ ಮೋಸ್ಟ್ ಅವೈಟೆಡ್ ಮೂವೀ. ಈ ಚಿತ್ರಕ್ಕಾಗಿ ಬರೀ ಸೌತ್ ಸಿನಿಮಾರಂಗ ಮಾತ್ರವಲ್ಲ ವಿಶ್ವ ಸಿನಿ ದುನಿಯಾವೇ ಕಣ್ಣರಳಿಸಿದೆ. ಈ ಚಿತ್ರದಲ್ಲಿ ತಾರಕ್ ಡಬಲ್ ರೋಲ್ ಪ್ಲೇ ಮಾಡ್ತಿದ್ದು, ಸಮುದ್ರ ತಟದ 10 ಹಳ್ಳಿಯ ರಕ್ಷಕನಾಗಿ ಕಾಣಿಸಿಕೊಳ್ತಿದ್ದಾರೆ. ತಂದೆ ಮತ್ತು ಮಗ ಎರಡು ಪಾತ್ರಕ್ಕೂ ಜೀವ ತುಂಬಿರೋ ಜೂನಿಯರ್ ಎನ್ ಟಿ ಆರ್, 10 ಹಳ್ಳಿಯ ಜನರ ರಕ್ಷಣೆಗಾಗಿ ಸುಮಾರು 10,000 ಎದುರಾಳಿಗಳ ಜೊತೆ ಕಾದಾಡಿದ್ದಾರಂತೆ. ಈ ಸೆನ್ಸೇಷನ್ ಸುದ್ದಿ ರಿವೀಲ್ ಆಗಿದ್ದು, ದೇವರ ಮೇಲಿನ ನಿರೀಕ್ಷೆ ಹೆಚ್ಚಿದೆ.
ದೇವರ ಸಮುದ್ರ ದಡದಲ್ಲಿ ನಡೆಯುವ ಕಥೆ ಎಂಬುದು ಈಗಾಗಲೇ ರಿವೀಲ್ ಆಗಿದೆ. ಬಿಡುಗಡೆಯಾಗಿರುವ ಟೀಸರ್ ನಲ್ಲಿ ಈ ಸಮುದ್ರ ಮೀನುಗಳಿಗಿಂತ ಕತ್ತಿನಾ, ರಕ್ತಾನಾ, ಜಾಸ್ತಿ ನೋಡೈತೆ. ಅದಕ್ಕೆ ಇದನ್ನ ಕೆಂಪುಸಮುದ್ರ ಅಂತಾರೇ ಅಂತ ತಾರಕ್ ಡೈಲಾಗ್ ಹೊಡೆದಿದ್ದಾರೆ. ಇದೊಂದು ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಸ್ಟೋರಿ ಟೆಲ್ಲಿಂಗ್ ಅಂಡ್ ವಿಷ್ಯೂಯಲ್ ಟ್ರೀಟ್ ಸಾಲಿಡ್ ಆಗಿ ಮೂಡಿಬಂದಿದೆ. ಇನ್ನೂ ಈ ಸಿನಿಮಾವನ್ನ ಯುವಸುಧಾ ಆರ್ಟ್ಸ್, ಎನ್ಟಿಆರ್ ಆರ್ಟ್ಸ್ ಜಂಟಿಯಾಗಿ ನಿರ್ಮಿಸಿದೆ. ಯಂಗ್ ಟೈಗರ್ ಜೊತೆಗೆ ಬಿಟೌನ್ ಬ್ಯೂಟಿ ಜಾಹ್ನವಿ ಕಪೂರ್, ಸೈಫ್ ಅಲಿಖಾನ್, ಪ್ರಕಾಶ್ ರಾಜ್, ಶ್ರೀಕಾಂತ್, ಮುರುಳಿ ಶರ್ಮಾ, ಶೈನ್ ಟಾಮ್ ಚಾಕೋ ಸೇರಿದಂತೆ ಅತೀ ದೊಡ್ಡ ತಾರಾಬಳಗ ಈ ಸಿನಿಮಾದಲ್ಲಿದೆ. ಭರ್ತಿ 300 ಕೋಟಿ ವೆಚ್ಚದಲ್ಲಿ ಎರಡು ಭಾಗದಲ್ಲಿ ತಯಾರಾಗಿರೋ ದೇವರ ಚಿತ್ರದ ಮೊದಲ ಭಾಗ, ಇದೇ ಅಕ್ಟೋಬರ್ 10 ರಂದು ವರ್ಲ್ಡ್ವೈಡ್ ರಿಲೀಸ್ ಆಗ್ತಿದೆ.