RRR ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ jr. NTR ಟಾಲಿವುಡ್ ನಲ್ಲಿ ಅವರದ್ದೇ ಛಾಪು ಮೂಡಿಸಿದ್ದಾರೆ. ಸದ್ಯ ಈಗ “ದೇವರ” ಎಂಬ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ.
ಈ ಸಿನಿಮಾದ ಶೂಟಿಂಗ್ ವೇಳೆ ಹೆಜ್ಜೇನು ದಾಳಿ ಮಾಡಿದೆ. ದೇವರ ಸಿನಿಮಾದ ಶೂಟಿಂಗ್ ವೈಜಾಗ್ ನ ಕಡೊಂದರಲ್ಲಿ ನಡೆಯುತ್ತಿತು. ಈ ಸಮಯದಲ್ಲಿ ಹೆಜ್ಜೇನು ಚಿತ್ರತಂಡದ ಮೇಲೆ ದಾಳಿ ಮಾಡಿದೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ದೇವರ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಹಾಗೂ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಜೇನು ಗೂಡಿನ ಮೇಲೆ ಯಾರಾದರೂ ಕಲ್ಲು ಎಸೆದಿದ್ದಾರೆ ಎನ್ನುವ ಅನುಮಾನ ಮೂಡಿದೆ. ಆದ್ರೆ ಶೂಟಿಂಗ್ ಸಂದರ್ಭದಲ್ಲಿ ಮುಖ್ಯ ಪಾತ್ರಧಾರಿಗಳಾದ ಜೂನಿಯರ್ ಎನ್ಟಿಆರ್, ಜಾನ್ವಿ ಕಪೂರ್ ಇರಲಿಲ್ಲ ಹೀಗಾಗಿ ಅವರು ಈ ದಾಳಿಯಿಂದ ಪಾರಾಗಿದ್ದಾರೆ.