ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಡೆವಿಲ್. ಒಂದಲ್ಲ ಒಂದು ವಿಚಾರವಾಗಿ ಸುದ್ದಿ ಮಾಡ್ತಾನೆ ಇರೋ ಡೆವಿಲ್ ಇದೀಗ ಬಿಗ್ ಅಪ್ಡೇಟ್ ಕೊಟ್ಟಿದೆ.
ಫಸ್ಟ್ ಲುಕ್ ಪೋಸ್ಟರ್ ಮೂಲಕವೇ ಸೌಂಡ್ ಮಾಡಿದ್ದ ಡೆವಿಲ್, ಮೊನ್ನೆಯಷ್ಟೇ ಚಿತ್ರದ ನಾಯಕಿ ವಿಚಾರವಾಗಿ ಸೌಂಡ್ ಮಾಡಿತ್ತು. ಇದೀಗ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ.. ಸ್ವತಃ ನಟ ದರ್ಶನ್ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ…ಯೆಸ್ ೨೦೨೪ ಅಂದ್ರೆ ಇದೇ ವರ್ಷ ಕ್ರಿಸ್ಮಸ್ ಹಬ್ಬಕ್ಕೆ ಡೆವಿಲ್ ಬಿಗ್ ಸ್ಕ್ರೀನ್ಗೆ ಲಗ್ಗೆ ಇಡಲಿದೆ…ನಲ್ಮೆಯ ಸೆಲೆಬ್ರೆಟೀಸ್ ಮತ್ತು ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ ಅಂತ ಹೇಳಿ ಈ ಖುಷಿ ವಿಚಾರವನ್ನು ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದಾರೆ..
ಅಂದಹಾಗೆ ಡೆವಿಲ್ ಡಿಸೆಂಬರ್ ಗೂ ಮೊದಲೇ ಅಂದ್ರೆ ಅಕ್ಟೋಬರ್ ಗೆ ರಿಲೀಸ್ ಆಗಬೇಕಿತ್ತು. ಆದ್ರೆ ದಚ್ಚು ಕೈಗೆ ಪೆಟ್ಟಾದ ಕಾರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ರು. ಇದೇ ಕಾರಣಕ್ಕೆ ರಿಲೀಸ್ ಡೇಟ್ ಮುಂದಕ್ಕೆ ಹೋಯ್ತು.
ಡೆವಿಲ್ ಚಿತ್ರಕ್ಕೆ ನಿರ್ದೇಶಕ ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದು, ಈ ಹಿಂದೆ ಇವರಿಬ್ಬರ ಕಾಂಬಿನೇಷನ್ ನಲ್ಲಿ ತಾರಕ್ ಸಿನಿಮಾ ಬಂದಿತ್ತು. ಇನ್ನು ನಾಯಕಿಯಾಗಿ ರಚನಾ ರೈ ಆಯ್ಕೆ ಆಗಿರೋದು ಗೊತ್ತೇಯಿದೆ..ಸದ್ಯದಲ್ಲೇ ಒಂದೊಂದೇ ಸ್ಯಾಂಪಲ್ ಗಳು ಹೊರಬರಲಿವೆ.