ಸ್ಯಾಂಡಲ್ವುಡ್ ಬಹದ್ದೂರ್ ಗಂಡು, ಬೆಂಕಿ ಚೆಂಡು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಬಾಲಿವುಡ್ ರೆಡ್ಕಾರ್ಪೆಟ್ ಹಾಕಿದೆಯಂತೆ. ಗ್ರೀಕ್ ಗಾಡ್ ಹೃತಿಕ್ ರೋಷನ್ ಅಭಿನಯದ ಮೋಸ್ಟ್ ಅವೈಟೆಡ್ ಸಿನಿಮಾವಾದ ವಾರ್-2 ಟೀಮ್ನಿಂದ ಅದ್ದೂರಿ ಹೀರೋಗೆ ಬುಲಾವ್ ಬಂದಿದೆಯಂತೆ. ಹೀಗೊಂದು ಸುದ್ದಿ ಬಿಟೌನ್ ಅಂಗಳದಿಂದ ಹೊರಬಿದ್ದು ಸ್ಯಾಂಡಲ್ವುಡ್ ತಲುಪಿದೆ. ಆಕ್ಷನ್ ಪ್ರಿನ್ಸ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಹಾಗಾದ್ರೆ, ಭರ್ಜರಿ ಹೀರೋ ಬಾಲಿವುಡ್ಗೆ ಲಗ್ಗೆ ಇಡ್ತಿರೋದು ನಿಜಾನಾ? ಹೃತಿಕ್ ರೋಷನ್ ಜೊತೆ ಸ್ಕ್ರೀನ್ ಶೇರ್ ಮಾಡ್ತಿರೋದು ಸತ್ಯಾನಾ? ಈ ಕುತೂಹಲಕ್ಕೆ ತೆರೆ ಎಳೆಯೋದು ಸದ್ಯಕ್ಕೆ ಸಾಧ್ಯವಿಲ್ಲ. ಯಾಕಂದ್ರೆ, ಬಿಟೌನ್ ಕಡೆ ಪಯಣ ಬೆಳೆಸ್ತಿರುವ ವಿಚಾರವನ್ನಾಗ್ಲೀ, ಹಿಂದಿ ಬೆಲ್ಟ್ನಿಂದ ಬಂದಿರೋ ಬುಲಾವ್ ಕುರಿತಾಗಿಯೂ ಧ್ರುವ ಸರ್ಜಾ ಕಡೆಯಿಂದ ಕನ್ಫರ್ಮೇಷನ್ ಸಿಕ್ಕಿಲ್ಲ.
ಹಿಂದಿ ಬೆಲ್ಟ್ನಲ್ಲಿ ಸ್ಯಾಂಡಲ್ವುಡ್ ಬೆಂಕಿಚೆಂಡು ಎನಿಸಿಕೊಂಡಿರುವ ಧ್ರುವಾಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಆಕ್ಷನ್ ಪ್ರಿನ್ಸ್ ನಟನೆಯ ಸಿನಿಮಾಗಳು ಹಿಂದಿಗೆ ಡಬ್ ಆಗಿ ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಯಿ ಮಾಡಿವೆ. ಹೀಗಾಗಿ ವಾರ್-2 ಟೀಮ್ ಭರ್ಜರಿ ಹೀರೋ ಮೇಲೆ ಕಣ್ಣಿಟ್ಟಿರಬಹುದು. ಕಟ್ಟುಮಸ್ತಾದ ದೇಹದಿಂದ, ಖಡಕ್ ಡೈಲಾಗ್ನಿಂದ ಅಭಿಮಾನಿಗಳನ್ನ ಹುಚ್ಚೆಬ್ಬಿಸೋ ಮಾಸ್ ಹೀರೋ ಧ್ರುವ ಸರ್ಜಾನ ಬಾಲಿವುಡ್ ಮಂದಿ ರತ್ನಗಂಬಳಿ ಹಾಕಿ ಕರ್ಕೊಂಡು ಹೋದ್ರೂ ಹೋಗಬಹುದು. ಆದರೆ, ಯಾವುದಕ್ಕೂ ಧ್ರುವ ಕಡೆಯಿಂದ ಸ್ಪಷ್ಟನೆ ಸಿಗೋವರೆಗೂ ಕಾತುರರಾಗಿ ಕಾಯಬೇಕಿದೆ.
ಸದ್ಯ ಧ್ರುವ ಎರಡು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ಗಳಿಗೆ ಹೀರೋ ಆಗಿದ್ದಾರೆ. ಎಪಿ ಅರ್ಜುನ್ ಡೈರೆಕ್ಟ್ ಮಾಡಿರೋ ಮಾರ್ಟಿನ್ ಹಾಗೂ ಶೋ ಮ್ಯಾನ್ ಪ್ರೇಮ್ ನಿರ್ದೇಶಿಸಿರುವ ಕೆಡಿ ಚಿತ್ರದಲ್ಲಿ ಧಗಧಗಿಸಿದ್ದಾರೆ. ಈ ಎರಡು ಚಿತ್ರಗಳು ಪಂಚ ಭಾಷೆಯಲ್ಲಿ ತಯಾರಾಗಿದ್ದು ಬಾಕ್ಸ್ ಆಫೀಸ್ಗೆ ಲಗ್ಗೆ ಇಡಲು ಸಕಲ ಸಿದ್ದತೆ ಮಾಡಿಕೊಳ್ತಿವೆ. ಈಗಾಗಲೇ ಮಾರ್ಟಿನ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ದಸರಾ ಹಬ್ಬಕ್ಕೆ ಸ್ಪೆಷಲ್ಲಾಗಿ ಅಕ್ಟೋಬರ್ 11 ರಂದು ಮಾರ್ಟಿನ್ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ.
ಇಂಟ್ರೆಸ್ಟಿಂಗ್ ಅಂದರೆ ಮಾರ್ಟಿನ್ ಸಿನಿಮಾದ ಡಬ್ಬಿಂಗ್ ರೈಟ್ಸ್ ಹೈಯೆಸ್ಟ್ ರೇಟ್ಗೆ ಬೇರೆ ಬೇರೆ ಭಾಷೆಗೆ ಸೇಲ್ ಆಗಿದೆಯಂತೆ. ಈ ವಿಚಾರವನ್ನ ಧ್ರುವ ಸರ್ಜಾ ಅವರು ಗ್ಯಾರಂಟಿ ನ್ಯೂಸ್ ಚಾನಲ್ ಜೊತೆ ಹಂಚಿಕೊಂಡಿದ್ದರು. ಈ ನಡುವೆಯೇ ಮಾರ್ಟಿನ್ ಮಹರಾಜ ಬಾಲಿವುಡ್ಗೆ ಗ್ರ್ಯಾಂಡ್ ಎಂಟ್ರಿಕೊಡಲು ಸಜ್ಜಾಗಿದ್ದೆರನ್ನುವ ಸುದ್ದಿ ಹಬ್ಬಿದೆ. ಈಗಾಗಲೇ ಸ್ಯಾಂಡಲ್ವುಡ್ನ ಹಲವು ಸೂಪರ್ ಸ್ಟಾರ್ಗಳು ಹಿಂದಿಯಲ್ಲಿ ಕಮಾಲ್ ಮಾಡಿದ್ದಾರೆ. ಒಂದ್ವೇಳೆ ಕೇಳಿಬರ್ತಿರೋ ಸುದ್ದಿ ನಿಜವಾದರೆ ಧ್ರುವ ಬಾಲಿವುಡ್ ಬಿಗ್ ಸ್ಕ್ರೀನ್ ಗೆ ಕಿಚ್ಚು ಹಚ್ಚಲಿದ್ದಾರೆ. ಆ ದಿನ ವಿಐಫಿಗಳು ಸರಪಟಾಕಿ ಹಚ್ಚಿ ಸಂಭ್ರಮಿಸಲಿದ್ದಾರೆ. ಆ ದಿನಕ್ಕಾಗಿ ಕಾದು ನೋಡೋಣ