ರಾಬರ್ಟ್ ಸಿನಿಮಾಕ್ಕೆ ಸೋನಲ್ ಮೊಂಟೆರೋ ರನ್ನ ನಾಯಕಿಯಾಗಿ ಆಯ್ಕೆ ಮಾಡಿದ್ದ ನಟ, ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಈಗ ಲೈಫಿನಾ ಸಿನಿಮಾಕ್ಕೂ ಅವರನ್ನೇ ಹೀರೋಯಿನ್ ಮಾಡಿಕೊಳ್ಳೋಕೆ ಡಿಸೈಡ್ ಮಾಡಿ, ಮದುವೆ ಡೇಟ್ ಕೂಡ ಫಿಕ್ಸ್ ಆಗಿದೆ, ಆ. 10 & 11ಕ್ಕೆ ಮದುವೆಯಾಗಲಿದ್ದಾರೆ ಈ ಜೋಡಿ.
ಇದೆ ಥರ ಈ ಹಿಂದೆ ಸಾಕಷ್ಟು ಜನ ನಟಿಯರು, ಸಿನಿಮಾ ನಿರ್ದೇಶಕರನ್ನೇ ಬದುಕಿನ ನಿರ್ದೇಶಕರನ್ನಾಗಿ ಮಾಡಿಕೊಂಡ ಸಾಕಷ್ಟು ಉದಾಹರಣೆಗಳಿವೆ
ರಕ್ಷಿತಾ – ಪ್ರೇಮ್:
ಕ್ರೇಜಿ ಕ್ವೀನ್ ರಕ್ಷಿತ್ ಆಗಿನ ಕಾಲದ ಟಾಪ್ ಹೀರೋಯಿನ್, ಸಿನಿಮಾಗಳ ಆಫರ್ಸ್ ಸುರಿಮಳೆ ಆಗೋವಾಗ್ಲೇ 2007ರಲ್ಲಿ ಹ್ಯಾಟ್ರಿಕ್ ಡೈರೆಕ್ಟರ್ ಪ್ರೇಮ್ ರನ್ನ ಪ್ರೀತಿಸಿ ಮದುವೆಯಾಗಿದ್ದರು.
ಪ್ರಿಯಾಂಕಾ – ಉಪೇಂದ್ರ:
ಕನ್ನಡದ ಸ್ಟಾರ್ ನಟ-ನಿರ್ದೇಶಕ ಉಪೇಂದ್ರರನ್ನ ನಟಿ ಪ್ರಿಯಾಂಕಾ 2003ರಲ್ಲಿ ಮದುವೆಯಾದ್ರು. ಉಪೇಂದ್ರ ರಿಯಲ್ ಸ್ಟಾರ್ ಆಗಿ, ಹೀರೋ ಆಗಿ ಫೇಮಸ್ ಆದ್ರೂ, ನಿರ್ದೇಶನದಿಂದಲೇ ಸೌತ್ ಸಿನಿಮಾದಲ್ಲೇ ತಮ್ಮದೇ ಬ್ರ್ಯಾಂಡ್ ಬೆಳೆಸಿಕೊಂಡಿದ್ದಾರೆ. ಈ ಡೈರೆಕ್ಟರ್ ಉಪ್ಪಿಯನ್ನೇ ಪ್ರಿಯಾಂಕಾ ಮೆಚ್ಚಿ ಮದುವೆಯಾದ್ರು.
ಮಿಲನ ನಾಗರಾಜ್ – ಡಾರ್ಲಿಂಗ್ ಕೃಷ್ಣ
ಡಾರ್ಲಿಂಗ್ ಕೃಷ್ಣ ಸದ್ಯ ಕನ್ನಡದ ಬೇಡಿಕೆಯ ನಟ, ಆದ್ರೆ ಕೃಷ್ಣ ಡೈರೆಕ್ಟರ್ ಕ್ಯಾಪ್ ತೊಟ್ಟಗ್ಲೇ ರಾಧೆಯಂತಹ ಮಿಲನ ಸಿನಿಮಾಕ್ಕು ಲೈಫ್ ಗೂ ಪಾರ್ಟ್ನರ್ ಆಗಿ ಸಿಕ್ಕರು. ಇಬ್ಬರು ಒಟ್ಟಾಗಿ ಸಿನಿಮಾ ನಿರ್ಮಾಣ ಮಾಡಿ, ಈಗ ಬದುಕಿನ ನಿರ್ಮಾಣದಲ್ಲಿ ಬ್ಯುಸಿ ಇದ್ದಾರೆ.
ಸುಹಾಸಿನಿ-ಮಣಿರತ್ನಮ್
ಇದೆ ರೀತಿ ಕನ್ನಡಿಗರ ನೆಚ್ಚಿನ ನಟಿ ಸುಹಾಸಿನಿ ಸೌತ್ ಸಿನಿಮಾದ ಮೋಸ್ಟ ಹ್ಯಾಪನಿಂಗ್ ನಿರ್ದೇಶಕ ಮಣಿರತ್ನಮ್ ರನ್ನ 1988ರಲ್ಲೇ ಮದುವೆಯಾಗಿದ್ರು. ಆಗ ಇಬ್ಬರದ್ದು ಸಿನಿಮಾರಂಗದಲ್ಲಿ ಬೆಳೆಯುವ ಹಂತ.
ಶೃತಿ – ಎಸ್. ಮಹೇಂದರ್
ಕನ್ನಡದ ಜನಪ್ರಿಯ ನಟಿ ತಮ್ಮ ಬ್ಲಾಕ್ ಬಸ್ಟರ್ ಸಿನಿಮಾಗಳ ನಿರ್ದೇಶಕ ಎಸ್. ಮಹೇಂದರ್ ರನ್ನ 1998ರಲ್ಲಿ ಮದುವೆಯಾದರು, ನಂತ್ರ 2011ರಲ್ಲಿ ಡಿವೋರ್ಸ್ ಕೂಡ ಆಯ್ತು.
ಇದೆ ಥರ ಮದುವೆಯಾಗಿ ನಂತ್ರ ಜೀವನದ ಹೊಳೆ ದಾಟಲಾರದೆ, ತೆಪ್ಪ ಮಗುಚಿ ಹಾಕೊಂಡವರ ದೊಡ್ಡ ಪಟ್ಟಿ ಇದೆ. ನಟಿ ರೇಖಾದಾಸ್- ನಿರ್ದೇಶಕ ಓಂ ಪ್ರಕಾಶ್ ರಾವ್, ಆರತಿ-ಪುಟ್ಟಣ್ಣ ಕಣಗಾಲ್, ತುಳಸಿ-ಶಿವಮಣಿ ಹೀಗೆ ಹಲವರಿದ್ದಾರೆ.
ಇನ್ನೂ ಪ್ರೀತಿಸಿ ಮದುವೆಯಾದ್ರು ಒಟ್ಟಿಗೆ ಬಾಳಲಾರದೆ ವಿಧಿಯ ಆಟಕ್ಕೆ ಸೋತವರು ಇದ್ದಾರೆ ಸುಮಿತ್ರಾ-ಡಿ ರಾಜೇಂದ್ರ ಬಾಬು, ಅರುಂಧತಿ ನಾಗ್-ಶಂಕರ್ ನಾಗ್, ಇನ್ನೂ ಅನೇಕರಿದ್ದಾರೆ. ಕನ್ನಡ ಮಾತ್ರವಲ್ಲದೆ ಪರಭಾಸೆಗಳಲ್ಲೂ ಈ ಟ್ರೆಂಡ್ ಹೊಸದಾಗಿ ಉಳಿದಿಲ್ಲ.