ಡಾಲಿ ಧನಂಜಯ್ ತುಂಬಾ ನೆನಪು ಮಾಡಿಕೊಳ್ತಿದ್ದ, ಯಾವಾಗಲು ಮಾತಾಡ್ತಿದ್ದ ಅವ್ರ ಅಜ್ಜಿ ಮಲ್ಲಮ್ಮ (95) ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಹಾಸನದ ಅರಸೀಕೆರೆಯ ಕಾಳೇನಹಳ್ಳಿಯಲ್ಲಿರುವ ಡಾಲಿ ಧನಂಜಯ ಅವ್ರ ಸ್ವಗೃಹದಲ್ಲೇ ಮಲ್ಲಮ್ಮ ಮೃತಪಟ್ಟಿದ್ದಾರೆ. ಮಲ್ಲಮ್ಮ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಲಿಂಗದೇವರಾಜೇಗೌಡರ ಪತ್ನಿಯಾಗಿದ್ದ ಮಲ್ಲಮ್ಮ ಅವರಿಗೆ ಒಟ್ಟು ಐವರು ಮಕ್ಕಳು. ಇವರ ಎರಡನೇ ಪುತ್ರ ಅಡವಿಸ್ವಾಮಿ, ಅವರ ಮಗನೇ ಡಾಲಿ ಧನಂಜಯ್.
ಡಾಲಿ ಧನಂಜಯ ಅವ್ರೇ ಯಾವಾಗ್ಲೇ ಊರಿಗೆ ಹೋದರೂ ಅವ್ರ ಅಜ್ಜಿಯ ಜೊತೆಗೊಂಧು ಫೋಟೋ ಕ್ಲಿಕ್ಕಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಾ ಇದ್ರು, ಅಜ್ಜಿಯ ಗುಣಗಾನ ಮಾಡ್ತಾ ಇದ್ರು. ಡಾಲಿ ಧನಂಜಯ ಅವ್ರ ಮದುವೆ ನೋಡೋದೇ ತಮ್ಮ ಕೊನೆ ಆಸೆ ಅಂತಿದ್ರು ಅಜ್ಜಿ ಮಲ್ಲಮ್ಮ, ಆದ್ರೆ ಧನಂಜಯ್ ಅವ್ರ ಮದುವೆ ನೋಡದೇ ನಿಧನರಾಗಿದ್ದಾರೆ. ಈ ಕುರಿತು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲೂ ಮಲ್ಲಮ್ಮ ಪ್ರಸ್ತಾಪ ಮಾಡಿದ್ರು, ಕೊನೆಗೂ ಆ ಆಸೆ ಆಸೆಯಾಗಿಯೇ ಉಳಿದಿದೆ.