ಹೆಮ್ಮೆಯ ಕನ್ನಡಿಗನಾಗಿ ಬಾಳಿ ಬದುಕಿದ ವರನಟ ದಿವಂಗತ ಡಾ. ರಾಜ್ಕುಮಾರ್ ಅವರಿಗೆ 95 ನೇ ಜನುಮ ದಿನದ ಸಂಭ್ರಮ. ಈ ದಿನವನ್ನು ರಾಜ್ ಅಭಿಮಾನಿಗಳು ಬಗೆ ಬಗೆಯ ಕಾರ್ಯಕ್ರಮಗಳ ಮೂಲಕ ಮತ್ತೆ ನೆನೆಪಿಸಿಕೊಳ್ಳುತ್ತಿರುತ್ತಾರೆ. ಇಂದು ದೊಡ್ಮನೆ ಕುಟುಂಬ ರಾಜ್ ಕುಮಾರ್ ಸಮಾಧಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.
ರಾಜ್ಕುಮಾರ್ ಅವರು ಬದುಕಿದ್ದಾಗ ನೇತ್ರದಾನದ ಮೂಲಕ ಜಾಗೃತಿ ಮೂಡಿಸಿದ್ದರು. ತಮ್ಮ ನಿಧನದ ಬಳಿಕ ಕಣ್ಣುಗಳನ್ನು ದಾನ ಮಾಡಿದ್ದರು. ಪ್ರತಿ ವರ್ಷದಂತೆ ಸಮಾಧಿ ಬಳಿ ನೇತ್ರದಾನ ನೋಂದಣಿ, ರಕ್ತದಾನ, ಅನ್ನದಾನದ ಕಾರ್ಯಗಳು ನಡೆಯಲಿವೆ. ಪುಣ್ಯಭೂಮಿಗೆ ಬರುವ ಅಭಿಮಾನಿಗಳಿಗೆ ಅಭಿಮಾನಿಗಳಿಂದಲೇ ಅನ್ನದಾನ ನೆರವೇರಲಿದೆ. ಇನ್ನು ಬೆಂಗಳೂರಿನ ಪ್ರತಿ ಗಲ್ಲಿ ಗಲ್ಲಿಗಲ್ಲಿಯಲ್ಲಿರುವ ರಾಜ್ ಕುಮಾರ್ ಪ್ರತಿಮೆಗಳಿಗೂ ವಿಶೇಷ ಪೂಜೆ ಆಗುತ್ತದೆ. ಜತೆಗೆ ಅನ್ನ ಸಂತರ್ಪಣೆಯೂ ಕಾರ್ಯಕ್ರಮಗಳು ನಡೆಯಲಿವೆ.