ಬೆಂಗಳೂರಿನಲ್ಲಿ ಸಾಮಾನ್ಯ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿದ್ದ ಒಬ್ಬ ವ್ಯಕ್ತಿ, ಇಂದು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್. 74ರ ಹರೆಯದಲ್ಲೂ ಯಂಗ್ ಸ್ಟಾರ್ ಗಳನ್ನ ನಾಚಿಸುವಂತಹ ಸಿನಿಮೋತ್ಸಾಹ, ಜೀವನೋತ್ಸಾಹ. ತಮಿಳು ಬಾಕ್ಸ್ ಆಫೀಸ್ ಗೆ ಇಂದಿಗೂ ಇವರೇ ಕಿಂಗ್. ಯೆಸ್.. ಅವ್ರು ಒನ್ ಅಂಡ್ ಓನ್ಲಿ ತಲೈವಾ ರಜನೀಕಾಂತ್.
ಇಂದು ಸೂಪರ್ ಸ್ಟಾರ್ ರಜನೀಕಾಂತ್ ಅವರಿಗೆ 75ನೇ ಜನುಮ ದಿನ. ಅಂದಹಾಗೆ ರಜನೀಕಾಂತ್ ಈ ಮಟ್ಟಕ್ಕೆ ಬೆಳೆಯೋಕೆ ಅವರಲ್ಲಿದ್ದ ಟ್ಯಾಲೆಂಟ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಆ ಟ್ಯಾಲೆಂಟ್ ನಿಂದ ಅವರು ಒಳ್ಳೆಯ ನಟನಾಗಬಹುದಿತ್ತು ಅಷ್ಟೇ. ರಜನಿ ಇವತ್ತು ಸರಳತೆಯ ಸಾಮ್ರಾಟನಾಗಿ, ಇಡೀ ವಿಶ್ವವೇ ಮೆಚ್ಚುವ ಸೂಪರ್ ಸ್ಟಾರ್ ಆಗೋಕೆ ಕಾರಣ ನಮ್ಮ ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರು.
ಹೌದು.. ತಮಿಳು ನೆಂಟ ರಜನಿ ಅಣ್ಣಾವ್ರ ಭಂಟ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಅಣ್ಣಾವ್ರನ್ನ ಹತ್ತಿರದಿಂದ ನೋಡಿ, ಅವರನ್ನ ಅರಿತ ರಜನಿ, ಅವರಲ್ಲಿದ್ದ ಸರಳತೆಯನ್ನ ಅವಗಾಹನೆ ಮಾಡಿಕೊಂಡರು. ಸರಳ- ಸಜ್ಜನಿಕೆಯೇ ನಿಜವಾದ ಸ್ಟಾರ್ಡಮ್ ಅನ್ನೋದನ್ನ ರಾಜ್ ಕುಮಾರ್ ಅವರಿಂದ ಕಲಿತರು. ಇಂದಿಗೂ ರಜನಿ ವರ್ಚಸ್ಸಿಗೆ ಅದೇ ಕಾರಣ. ಬಹುಶಃ ಕಮಲ್ ಹಾಸನ್ ಕೂಡ ಅಣ್ಣಾವ್ರ ಸರಳತೆಯನ್ನ ಅಳವಡಿಸಿಕೊಂಡಿದ್ದಿದ್ರೆ ರಜನಿಯನ್ನ ಮೀರಿಸೋ ಸೂಪರ್ ಸ್ಟಾರ್ ಆಗ್ತಿದ್ರು.
ಐಕಾನಿಕ್ ಸ್ಟೈಲ್ಗಳಿಂದ ಅಭಿಮಾನಿಗಳ ಮನಸ್ಸು ಗೆದ್ದ ಸೂಪರ್ ಸ್ಟಾರ್ ರಜನೀಕಾಂತ್ ಅವರ ಹುಟ್ಟುಹಬ್ಬ ಇಂದು. 74ನೇ ವಸಂತಕ್ಕೆ ರಜನೀಕಾಂತ್ ಅವರು ಕಾಲಿಟ್ಟಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.