KGF ಡೈರೆಕ್ಟರ್ ಪ್ರಶಾಂತ್ ನೀಲ್, ಜ್ಯೂ.ಎನ್ಟಿಆರ್ ಮುಂದಿನ ಚಿತ್ರಕ್ಕೆ ಜೊತೆಯಾಗಲಿದ್ದಾರೆ. ಈ ಚಿತ್ರದಲ್ಲಿ ತಾರಕ್ಗೆ ರಶ್ಮಿಕಾ ಮಂದಣ್ಣ ನಾಯಕಿ ಆಗ್ತಾರೆ ಅನ್ನೊ ಸುದ್ದಿ ಇದೀಗ ಸಿನಿ ಲೋಕದಲ್ಲಿ ಹರಿದಾಡುತ್ತಿದೆ.
ಜ್ಯೂ.ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನ ಈ ಸಿನಿಮಾಗೆ ’ಡ್ರ್ಯಾಗನ್’ ಎಂದು ಟೈಟಲ್ ಇಡಲಾಗಿದ್ದು ಇದೇ ಆಗಸ್ಟ್ನಿಂದ ಶೂಟಿಂಗ್ ಪ್ರಾರಂಭ ಮಾಡಲಾಗುತ್ತೆ ಅಂತಾ ತಾರಕ್ ಹುಟ್ಟುಹಬ್ಬದ ದಿನ ಚಿತ್ರತಂಡ ತಿಳಿಸಿದೆ. ಸಿನಿಮಾ ಘೋಷಣೆಯ ನಂತರ ಜ್ಯೂ.ಎನ್ಟಿಆರ್ಗೆ ನಾಯಕಿ ಯಾರಾಗ್ತಾರೆ ಎಂಬ ಸುದ್ದಿ ಭಾರೀ ಚರ್ಚೆಯಾಗಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಬಿಗ್ ಬಜೆಟ್ನಲ್ಲಿ ಡ್ರ್ಯಾಗನ್ ಸಿನಿಮಾ ಮೂಡಿ ಬರುತ್ತಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ.
ಸ್ಟಾರ್ ನಾಯಕಿಯ ಹುಡುಕಾಡದಲ್ಲಿದ್ದ ಚಿತ್ರತಂಡಕ್ಕೆ ನೆನಪಾಗಿರೋದು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ. ಈ ಚಿತ್ರದಲ್ಲಿ ನಾಯಕಿ ಪಾತ್ರಕ್ಕೂ ತುಂಬಾನೇ ಪ್ರಾಮುಖ್ಯತೆ ಇದೆ. ಜ್ಯೂ.ಎನ್ಟಿಆರ್ಗೆ ಕನ್ನಡದ ನಟಿ ರಶ್ಮಿಕಾ ಸೂಕ್ತ ಎಂಬುದು ತಂಡದ ಅಭಿಪ್ರಾಯ ಎನ್ನಲಾಗಿದೆ. ಈ ಸುದ್ದಿ ನಿಜನಾ? ಸುಳ್ಳಾ? ಚಿತ್ರತಂಡ ಈ ಕುರಿತು ಅಧಿಕೃತ ಘೋಷಣೆ ಮಾಡುವವರೆಗೂ ಕಾದುನೋಡಬೇಕಿದೆ.
ಪ್ರಶಾಂತ್ ನೀಲ್ ಮತ್ತು ರಶ್ಮಿಕಾ ಮಂದಣ್ಣ ಕನ್ನಡದವರು. ಜ್ಯೂ.ಎನ್ಟಿಆರ್ ಕುಂದಾಪುರದವರಾಗಿದ್ದು, ಅವರಿಗೆ ಕನ್ನಡ ಭಾಷೆಯ ಮೇಲೆ ವಿಶೇಷ ಅಭಿಮಾನವಿದೆ. ಅಂದುಕೊಂಡಂತೆ ಎಲ್ಲವೂ ಆದರೆ ಈ ಸಿನಿಮಾದಲ್ಲಿ ಕನ್ನಡಿಗರದ್ದೆ ಹವಾ.