- ವಿಚ್ಚೇದನ ಕೋರಿ ದುನಿಯಾ ವಿಜಯ್ ಸಲ್ಲಿಸಿದ್ದ ಅರ್ಜಿ ವಜಾ
- 2 ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಿಂದ ಆದೇಶ
ಸ್ಯಾಂಡಲ್ವುಡ್ನ ಖ್ಯಾತ ನಟ ದುನಿಯಾ ವಿಜಯ್ ಅವರು ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ಬೇಕು ಎಂದು ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಬೆಂಗಳೂರಿನ ಶಾಂತಿನಗರದ ಫ್ಯಾಮಿಲಿ ಕೋರ್ಟ್ನಲ್ಲಿ ದುನಿಯಾ ವಿಜಯ್ ಅವರು ಅರ್ಜಿ ಸಲ್ಲಿಸಿದ್ದರು. ಕ್ರೌರ್ಯದ ಆಧಾರದಲ್ಲಿ ಅವರು ವಿಚ್ಛೇದನ ಕೋರಿದ್ದರು. ಆದರೆ ಪತ್ನಿ ನಾಗರತ್ನ ಮೇಲಿನ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ದುನಿಯಾ ವಿಜಿ ಅವರ ಅರ್ಜಿಯನ್ನು ವಜಾಗೊಳಿಸಿ ಫ್ಯಾಮಿಲಿ ಕೋರ್ಟ್ ಆದೇಶ ಹೊರಡಿಸಿದೆ.
ನಾಗರತ್ನ ಮತ್ತು ದುನಿಯಾ ವಿಜಯ್ ಅವರ ಸಂಸಾರದಲ್ಲಿ ಬಿರುಕು ಮೂಡಿತ್ತು. ಈ ಹಿನ್ನೆಲೆ 2018ರಲ್ಲಿ ವಿಜಯ್ ಅವರು ಡಿವೋರ್ಸ್ ಸಲುವಾಗಿ ಅರ್ಜಿ ಸಲ್ಲಿಸಿದ್ದರು. ಮಕ್ಕಳ ಜವಾಬ್ದಾರಿ, ಪತ್ನಿಗೆ ಜೀವನಾಂಶ ನೀಡಲು ಕೂಡ ಅವರು ಒಪ್ಪಿದ್ದಾರೆ. ಆದರೆ, ಪ್ರತಿ ಬಾರಿ ಕೋರ್ಟ್ನಲ್ಲಿ ವಿಚಾರಣೆ ನಡೆದಾಗ ನಾಗರತ್ನ ಅವರು ಪತಿಯನ್ನು ಬಿಡಲು ಒಪ್ಪಿಕೊಳ್ಳಲಿಲ್ಲ.
ಇಂದು ದುನಿಯಾ ವಿಜಯ್ ಮತ್ತು ನಾಗರತ್ನ ಅವರು ವಿಚ್ಛೇನದ ಅಂತಿಮ ತೀರ್ಪು ಹೊರಬರಲಿದೆ ಎಂಬ ಕಾರಣಕ್ಕೆ ಎಲ್ಲರಲ್ಲೂ ಕುತೂಹಲ ಮೂಡಿತ್ತು. ಕೌಟುಂಬಿಕ ನ್ಯಾಯಾಲಯವು ವಿಜಯ್ಗೆ ವಿಚ್ಛೇನದ ನೀಡಿಲ್ಲ.