- ನಾನು ನಂಬಿದ ದೇವರಿಂದ ಸಿಕ್ಕ ಗೆಲುವು, ನನ್ನ ನಂಬಿಕೆಗೆ ಸಿಕ್ಕ ಗೆಲುವು
ಸ್ಯಾಂಡಲ್ವುಡ್ನಲ್ಲಿ ಒಂದರ ಮೆಲೊಂದರಂತೆ ವಿಚ್ಛೇದನದ ವಿವಾದಗಳು ನಡೆಯುತ್ತಿವೆ ನಿವೇದಿತಾ-ಚಂದನ್ ವಿಚ್ಛೇದನ, ಅದರ ಬೆನ್ನಲ್ಲೆ ಯುವ ರಾಜ್ಕುಮಾರ್ ಹಾಗೂ ಶ್ರೀದೇವಿಯ ವಿಚ್ಛೇದನ ಪರಸ್ಪರ ಆರೋಪ-ಪ್ರತ್ಯಾರೋಪ. ಇದಾದ ಬಳಿಕ ದರ್ಶನ್ ಕೊಲೆ ಪ್ರಕರಣ. ಇದರ ಬಳಿಕ ದುನಿಯಾ ವಿಜಯ್ ದಾಂಪತ್ಯ ಪ್ರಕರಣವೂ ಸದ್ದು ಮಾಡುತ್ತಿದೆ.
ವಿಷಯ ಏನು ?
ಕೆಲ ವರ್ಷಗಳ ಹಿಂದೆ ತಮಗೆ ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ಬೇಕೆಂದು ನಟ ವಿಜಯ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿಕೊಂಡಿದ್ದರು. ಆದರೆ ಕೌಟುಂಬಿಕ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದ್ದು, ವಿಚ್ಛೇದನ ನೀಡಲು ನಿರಾಕರಿಸಿದೆ.
ವಿಚ್ಛೇದನ ಪ್ರಕರಣದಲ್ಲಿ ದುನಿಯಾ ವಿಜಯ್ ಪತ್ನಿ ನಾಗರತ್ನ ಅವರಿಗೆ ಗೆಲುವಾಗಿದೆ. ಅದರ ಬೆನ್ನಲ್ಲೆ ಫೇಸ್ಬುಕ್ನಲ್ಲಿ ದೀರ್ಘವಾದ ಪೋಸ್ಟ್ ಹಂಚಿಕೊಂಡಿರುವ ನಾಗರತ್ನ, ಇದು ನಾನು ನಂಬಿದ ದೇವರಿಂದ ಸಿಕ್ಕ ಗೆಲುವು, ನನ್ನ ನಂಬಿಕೆಗೆ ಸಿಕ್ಕ ಗೆಲುವು’ ಎಂದಿದ್ದಾರೆ. ‘ಸಮಸ್ತ ನಾಡಿನ ಜನತೆಗೆ ನನ್ನ ನಮಸ್ಕಾರ , ಈ ದಿನ ತುಂಬಾ ಖುಷಿ ಕೊಟ್ಟ ದಿನವಾಗಿದೆ. ನನ್ನ ಪತಿ ವಿಜಯ್ ರವರು ತಮಗೆ ವಿಚ್ಛೇಧನ ಬೇಕೆಂದು ಸ್ವಲ್ಪ ವರ್ಷಗಳ ಹಿಂದೆ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಫೇಸ್ ಬುಕ್ ನಲ್ಲಿ ಏನನ್ನು ಹಂಚಿಕೊಂಡಿದ್ದಾರೆ ?
ಆ ಹೋರಾಟದಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ನನಗೆ ಜಯ ಸಿಕ್ಕಿದೆ, ನಾನು ನಂಬಿದ ದೇವರು ನನ್ನ ಕೈ ಬಿಡಲಿಲ್ಲ, ಇದು ನನ್ನ ಜಯ ಅನ್ನೋದಕ್ಕಿಂತ ನನ್ನ ಪತಿ ಅಧಿಕೃತವಾಗಿ ಇನ್ನೊಂದು ಮದುವೆಯಾಗಲು ಅವಕಾಶ ಸಿಕ್ಕಿಲ್ಲ ಅನ್ನೋ ನಿಜ!!! ಏಕೆಂದರೆ ನನಗೆ , ನನ್ನ ಅಪ್ಪ ಅಮ್ಮ ಮದುವೆ ಮಾಡಿಕೊಟ್ಟಾಗ ಹೇಳಿದ್ದು ಕಲಿಸಿದ್ದು ಒಂದೇ. ಗಂಡನೇ ದೇವರು, ಅತ್ತೆ ಮಾವನೇ ನಿಮ್ಮವರು, ಗಂಡನ ಮನೆಯೇ ನಿನ್ನ ಮನೆ, ಎಷ್ಟೇ ಕಷ್ಟಗಳು, ಏನೇ ಸಮಸ್ಯೆ ಬಂದರೂ ಅದೇ ಮನೆಯಲ್ಲೇ ಇರಬೇಕು ಅವರೇ ನಿನಗೆ ಎಲ್ಲಾ ಎಂದಿದ್ದರು. ನಾನೂ ಅದನ್ನೇ ಪಾಲಿಸಿಕೊಂಡು ಬಂದವಳು. ಅದನ್ನೇ ಪಾಲಿಸಿಕೊಂಡು ಹೋಗುವಳು , ನನಗೆ ನನ್ನ ಗಂಡ ಮಕ್ಕಳು ಇಷ್ಟೇ ಸರ್ವಸ್ವ!. ನನ್ನ ಜೀವ ಇರುವವರೆಗೂ ಅವರ ಜೊತೆಯಲ್ಲೇ ಇದ್ದು ಸಾಯುತ್ತೇನೆ’ಎಂದು ನಾಗರತ್ನ ಹೇಳಿದ್ದಾರೆ.