ಫ್ಯಾಮಿಲಿ ಮ್ಯಾನ್… ಸೌತ್ ಸುಂದರಿ ಸಮಂತಾ ಸೋಲ್ಜರ್ ಆಗಿ ಖದರ್ ತೋರಿಸಿದ ವೆಬ್ ಸೀರಿಸ್. ರಾಜಿ ಪಾತ್ರದಲ್ಲಿ ಡಿಗ್ಲಾಮ್ ಲುಕ್ನಲ್ಲಿ ಮಿಂಚಿದ ಸಮಂತಾ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದ್ದರು ಮತ್ತು ನೋಡುಗರ ಮೆಚ್ಚುಗೆಗೂ ಪಾತ್ರವಾಗಿದ್ದರು. ಆದರೆ, ರಾಜಿ ಪಾತ್ರದ ಕೆಲ ಸನ್ನಿವೇಶಗಳು ಪತಿ ನಾಗಚೈತನ್ಯಗೆ ಹಾಗೂ ಅವರ ಕುಟುಂಬದ ಘನತೆಗೆ ದಕ್ಕೆ ತರುವಂತಿದ್ದ ಕಾರಣಕ್ಕೆ ಈ ಜೋಡಿ ಡಿವೋರ್ಸ್ ಪಡೆಯುವಂತಾಯ್ತು. ಹೀಗೊಂದು ಸುದ್ದಿ ಕೂಡ ಆ ಸಂದರ್ಭದಲ್ಲಿ ಕೇಳಿಬಂದಿತ್ತು. ರಾಜಿ ಪಾತ್ರ ಆಪಲ್ ಬ್ಯೂಟಿ ಸಮಂತಾಗೆ ಅಪಾರ ಪ್ರಮಾಣದಲ್ಲಿ ಜನಪ್ರಿಯತೆ ತಂದುಕೊಟ್ಟಿತ್ತು. ಹೀಗಾಗಿಯೇ ಸ್ಯಾಮ್ ರಾಜಿನಾ ನೆನಪು ಮಾಡ್ಕೊಂಡಿದ್ದಾರೆ. ಮೂರು ವರ್ಷ ತುಂಬಿದ ಸಂಭ್ರಮ ಸಡಗರದಲ್ಲಿರುವ ಫ್ಯಾಮಿಲಿ ಮ್ಯಾನ್-2ಗೆ ಶುಭಕೋರಿ ಹಾರ್ಟ್ ಎಮೋಜಿ ಜೊತೆ ಫೋಟೋ ಪೋಸ್ಟ್ ಮಾಡಿದ್ದಾರೆ. ಸ್ಯಾಮ್ ಫ್ಯಾನ್ಸ್ ಮಾತ್ರವಲ್ಲ ಸಕಲರೂ ಸ್ಯಾಮ್ಗೆ ಫ್ಯಾಮಿಲಿ ಮ್ಯಾನ್-3 ಯಾವಾಗ ಅಂತ ಪ್ರಶ್ನೆ ಮಾಡ್ತಿದ್ದಾರೆ.
ನಿಮಗೆಲ್ಲ ಗೊತ್ತಿರುವ ಹಾಗೇ ಫ್ಯಾಮಿಲಿ ಮ್ಯಾನ್ ಹಿಂದಿಯಲ್ಲಿ ನಿರ್ಮಾಣಗೊಂಡ ವೆಬ್ಸೀರಿಸ್. ರಾಜ್ ಅಂಡ್ ಡಿಕೆ ಬ್ರದರ್ಸ್ ಜೊತೆಯಾಗಿ ಈ ಸರಣಿಯನ್ನ ಕಟ್ಟಿಕೊಟ್ಟಿದ್ದರು. ಸ್ಪೈ ಥ್ರಿಲ್ಲರ್ ಜಾಹ್ನರ್ನಲ್ಲಿ ತಯಾರಾದ ಈ ವೆಬ್ ಸರಣಿಯಲ್ಲಿ ಮನೋಜ್ ಬಾಜ್ಪೇಯಿ, ಸಮಂತಾ, ಪ್ರಿಯಾಮಣಿ, ಕಿಶೋರ್, ನೀರಜ್ ಮಾಧವ್, ಶರಿಬ್ ಹಶ್ಮಿ, ಪವನ್ ಚೋಪ್ರಾ ಸೇರಿದಂತೆ ಹಲವರು ಮಿಂಚಿದ್ದರು.
ಫ್ಯಾಮಿಲಿ ಮ್ಯಾನ್ ಎರಡು ಭಾಗವೂ ಒಟಿಟಿ ವೇದಿಕೆಯಲ್ಲಿ ದೊಡ್ಡ ಮಟ್ಟದ ಯಶಸ್ಸನ್ನ ಗಳಿಸಿತ್ತು. ಕಮರ್ಷಿಯಲಿ ಬ್ಲಾಕ್ಬಸ್ಟರ್ ಹಿಟ್ಟಾಗಿತ್ತು. ಎರಡನೇ ಭಾಗ ತೆರೆಕಂಡಾಗ ತಮಿಳರನ್ನು “ಹೆಚ್ಚು ಆಕ್ಷೇಪಾರ್ಹ ರೀತಿಯಲ್ಲಿ”ತೋರಿಸಲಾಗಿದೆ ಎಂಬ ವಿವಾದ ಭುಗಿಲೆದ್ದಿತ್ತು. ಆದರೆ, ಕಾಂಟ್ರವರ್ಸಿ ನಡುವೆಯೂ ಫ್ಯಾಮಿಲಿ ಮ್ಯಾನ್ ಪಾರ್ಟ್-2 ಗೆಲುವಿನ ಕೇಕೆ ಹಾಕಿತ್ತು. ಅಂದೇ ಪಾರ್ಟ್3 ಬಗ್ಗೆ ಸುದ್ದಿ ಕೇಳಿಬಂದಿತ್ತಾದರೂ ಇನ್ನೂ ಅನೌನ್ಸ್ ಆಗಿಲ್ಲ. ಹೀಗಾಗಿ ವೆಬ್ಸರಣಿ ಪ್ರಿಯರು ಪ್ಲಸ್ ಸಮಂತಾ ಅಭಿಮಾನಿಗಳು ಪಾರ್ಟ್-3 ಯಾವಾಗ ಅಂತ ಕೇಳ್ತಿದ್ದಾರೆ.
ಸಮಂತಾ ಫ್ಯಾಮಿಲಿ ಮ್ಯಾನ್ ಸಾರಥಿಗಳಾದ ರಾಜ್ ಅಂಡ್ ಡಿಕೆ ಬ್ರದರ್ಸ್ ಡೈರೆಕ್ಟ್ ಮಾಡಿರುವ ಹನಿಬನಿ ವೆಬ್ ಸೀರಿಸ್ನಲ್ಲಿ ಮಿಂಚಿದ್ದಾರೆ. ಹನಿಬನಿ ಸ್ಪೈ ಆಕ್ಷನ್ ಥ್ರಿಲ್ಲರ್ ಟಿವಿ ಸೀರಿಸ್. ಅಮೇರಿಕಾದ ಸಿಟಾಡೆಲ್ ಸೀರಿಸ್ನ ಹಿಂದಿಯಲ್ಲಿ ಹನಿಬನಿ ಹೆಸರಲ್ಲಿ ತಯಾರಿಸಿದ್ದಾರೆ. ಬಾಲಿವುಡ್ ನಟ ವರುಣ್ ಧವನ್, ಸಮಂತಾ, ಸಿಖಂದರ್ ಕೇರ್ ಸೇರಿದಂತೆ ಹಲವು ಬಿಗ್ ಸ್ಟಾರ್ಸ್ ಈ ವೆಬ್ ಸರಣಿಗೆ ಬಣ್ಣ ಹಚ್ಚಿದ್ದಾರೆ.