ಕನ್ನಡದಲ್ಲಿ ಸದ್ದಿಲ್ಲದೇ ಸಿನಿಮಾಗಳು ತೆರೆ ಕಾಣಲು ತಯಾರಾಗಿವೆ. ಇದು ಬಹು ತಾರಾಗಣದ ಚಿತ್ರವಾಗಿದ್ದು, ನಟರಾದ ಅನೀಶ್, ಗುರುನಂದನ್, ಚಿಕ್ಕಣ್ಣ ಮತ್ತು ರಂಗಾಯಣ ರಘು ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ ಸಿದ್ದವಾಗಿದೆ. ಒಂದೇ ಫ್ರೇಮ್ಗೆ ತಂದು ಆಕ್ಷನ್ ಕಟ್ ಹೇಳುತ್ತಿರುವುದು ಡಬಲ್ ಇಂಜಿನ್ ಮತ್ತು ಬ್ರಹ್ಮಚಾರಿ ಚಿತ್ರಗಳನ್ನು ನಿರ್ದೇಶಿಸಿದ್ದ ಚಂದ್ರಮೋಹನ್.
ಚಂದ್ರ ಮೋಹನ್ ಹೊಸ ಪ್ರಯತ್ನಕ್ಕೆ ಫಾರೆಸ್ಟ್ ಎಂದು ಟೈಟಲ್ ಇಡಲಾಗಿದೆ. ಅಡ್ವೆಂಚರಸ್ ಮತ್ತು ಕಾಮಿಡಿ ಸಿನಿಮಾವಾಗಿದೆ. ಈ ಚಿತ್ರ 80 % ಭಾಗ ಕಾಡಿನಲ್ಲಿಯೇ ಸಾಗುತ್ತದೆ. ಚಿಕ್ಕಣ್ಣ ಅನೀಶ್, ಗುರುನಂದನ್ ಹಾಗೂ ರಂಗಾಯಣ ರಘು ನಾಲ್ಕು ತಾರೆಯರು ಫಾರೆಸ್ಟ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಫನ್ ಜತೆಗೆ ಥ್ರಿಲ್ಲಿಂಗ್ ರೈಡ್ ಅನುಭವ ನೀಡುವ ಫಾರೆಸ್ಟ್ ಚಿತ್ರಕ್ಕೆ ಎನ್ಎಂಕೆ ಸಿನಿಮಾಸ್ ಬ್ಯಾನರ್ ನಡಿ ಕಾಂತರಾಜು ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾರಂಗದ ಮೇಲಿನ ಆಸಕ್ತಿಯಿಂದ ಫಾರೆಸ್ಟ್ ಮೂಲಕ ನಿರ್ಮಾಪಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.
ಕಾಂತರಾಜ್ ನಿರ್ಮಿಸಿರುವ ಫಾರೆಸ್ಟ್ ಚಿತ್ರದಲ್ಲಿ ಅರ್ಚನಾ ಕೊಟ್ಟಿಗೆ ಮತ್ತು ಶರಣ್ಯಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಅವಿನಾಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಜನಿಕಾಂತ್ ಅವರ ಚಿತ್ರದಲ್ಲಿನ ಪಾತ್ರಕ್ಕಾಗಿ ಮೆಚ್ಚುಗೆ ಪಡೆದ ಸೂರಜ್ ಪಾಪ್ಸ್ ಅವರು ಫಾರೆಸ್ಟ್ ಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ರವಿಕುಮಾರ್ ಛಾಯಾಗ್ರಹಣ, ಧರ್ಮವೀರ್ ಮತ್ತು ವೀರ್ ಸಮರ್ಥ್ ಸಂಗೀತ ನೀಡಲಿದ್ದಾರೆ.