‘ಓ ಮನಸೇ’, ‘ಕೇಸ್ ಆಫ್ ಕೊಂಡಾಣ, ‘ಜೋಗ್ 101’ ಮುಂತಾದ ಥ್ರಿಲ್ಲರ್ ಸಿನಿಮಾಗಳಲ್ಲಿ ನಟಿಸಿದ್ದ ವಿಜಯ ರಾಘವೇಂದ್ರ ಈಗ ಇನ್ನೊಂದು ಥ್ರಿಲ್ಲರ್ ಜಾನರ್ ಸಿನಿಮಾದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಅದುವೇ “ಗ್ರೇ ಗೇಮ್ಸ್” ಈ ಸಿನಿಮಾದ ಟ್ರೈಲರ್ ಅನ್ನ ಅಶ್ವಿನಿ ಪುನೀತ್ ರಾಜ್ಕುಮಾರ್ , ಶ್ರೀಮುರಳಿ ರಿಲೀಸ್ ಮಾಡಿದ್ದಾರೆ…
ಈ ಸಿನಿಮಾದಲ್ಲಿ ವಿಜಯ ರಾಘವೇಂದ್ರ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಜೊತೆಗೆ ಮತ್ತೊಂದು ವಿಶೇಷ ಏನು ಅಂದ್ರೇ ವಿಜಯ ರಾಘವೇಂದ್ರ ಮತ್ತು ಶ್ರೀ ಮುರಳಿ ಅವರ ಅಕ್ಕನ ಮಗ ಜೈ, ಈ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.. ಟ್ರೈಲರ್ ನಲ್ಲಿ ಜೈ ಅವರ ನಟನೆ ನೋಡ್ತಾಯಿದ್ರೇ ಸಖತ್ ಪ್ರಾಮಿಸಿಂಗ್ ಅನಿಸುತ್ತಿದೆ. ಜೊತೆಗೆ ಮಸ್ತ್ ಸ್ಟೇಪ್ಸ್ ಕೂಡ ಹಾಕಿದ್ದಾರೆ.. ಜೈ ಗೆ ಜೋಡಿಯಾಗಿ ಹೊಸ ಪ್ರತಿಭೆ ಇಶಿತಾ ಸಿಂಗ್ ಕೂಡ ಸ್ಯಾಂಡಲ್ ವುಡ್ ಗೆ ಡೆಬ್ಯೂ ಮಾಡ್ತಾಯಿದ್ದಾರೆ..
ಟ್ರೈಲರ್ ರಿಲೀಸ್ ಮಾಡಿ ಮಾತಾಡಿದ ಶ್ರೀಮುರಳಿ “ಈ ಸಿನಿಮಾದಲ್ಲಿ ನಮ್ ಅಣ್ಣ ತುಂಬಾ ಮುದ್ದಾಗಿ ಕಾಣ್ತಾಯಿದ್ದಾನೆ.. ತುಂಬಾ ದಿನಗಳ ಬಳಿಕ ಈ ರೀತಿಯಾಗಿ ನಮ್ ಅಣ್ಣಾ ಕಾಣಿಸುತ್ತಿರೋದು. ಜೊತೆಗೆ ಅಳಿಯ ಈ ಲೆವೆಲ್ ಗೆ ನಟನೆ ಮಾಡ್ತಾನೆ ಅಂತ ಅಂದುಕೊಂಡಿರಲಿಲ್ಲ ಸಿನಿಮಾ ಟೀಮ್ ಗೆ ಒಳ್ಳೆದಾಗ್ಲಿ ಅಂತ ವಿಶ್ ಮಾಡಿದ್ರು..
ಇನ್ನೂ ಗಂಗಾಧರ್ ಸಾಲಿಮಠ ನಿರ್ದೇಶನದ ಈ ‘ಗ್ರೇ ಗೇಮ್ಸ್’ಸಿನಿಮಾ ಮೇ 10ರಂದು ತೆರೆ ಕಾಣಲಿದ್ದು, ವಿಜಯರಾಘವೇಂದ್ರ ಜೊತೆ ನಾಯಕಿಯಾಗಿ ನಟಿ ಭಾವನಾ ರಾವ್ ಅಭಿನಯಿಸಿದ್ದು, ಶ್ರುತಿ ಪ್ರಕಾಶ್, ರವಿ ಭಟ್, ಅಪರ್ಣಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
DEES FILMS ಬ್ಯಾನರ್ನಲ್ಲಿ “ಗ್ರೇ ಗೇಮ್ಸ್” ಸಿನಿಮಾ ನಿರ್ಮಾಣವಾಗಿದೆ.. ವರುಣ್ ಡಿಕೆ ಛಾಯಾಗ್ರಹಣ, ಜಗದೀಶ್ ಎನ್ ಸಂಕಲನ, ಶ್ರೀಯಾಂಶ ಶ್ರೀರಾಮ್, ಡೊಳೇಶ್ವರ್ ರಾಜ್ ಸುಂಕು, ಅಶ್ವಿನ್ ಹೇಮಂತ್ ಮ್ಯೂಸಿಕ್ ನೀಡಿದ್ದಾರೆ. ಕಿರಣ್ ಕಾವೇರಪ್ಪ ಸಾಹಿತ್ಯ, ಟಗರು ರಾಜು ನೃತ್ಯ ನಿರ್ದೇಶನ ಮಾಡಿದ್ದು, ಬಸವರಾಜ್ ಖೇಡದ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಒಟ್ಟಿನಲ್ಲಿ ವಿಜಯರಾಘವೇಂದ್ರ ಈಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ…