- ಮಾನಸಿಕ ನೆಮ್ಮದಿಗಾಗಿ ಡಿವೋರ್ಸ್ ಘೋಷಿಸಿದ ಮ್ಯೂಸಿಕ್ ಡೈರೆಕ್ಟರ್ ಕಂ ಆಕ್ಟರ್ ಜಿವಿ ಪ್ರಕಾಶ್
ಬ್ರೇಕಪ್, ಡಿವೋರ್ಸ್ ಪ್ರಕರಣಗಳು ಬಾಲಿವುಡ್ ಅಂಗಳದಲ್ಲಿ ಹೆಚ್ಚಾಗಿ ಕೇಳಿಬರ್ತಿದ್ವು. ಆದ್ರೀಗ ಸೌತ್ ಸಿನಿಮಾ ಇಂಡಸ್ಟ್ರಿಯ ಸಿನಿಮಂದಿಯಲ್ಲೂ ಡಿವೋರ್ಸ್ ಘೋಷಿಸೋದು ಕಾಮನ್ ಆಗ್ತಿದೆ. ಅಮಲಪೌಲ್, ಸಮಂತಾ, ಧನುಷ್ ಸೇರಿದಂತೆ ಸಾಕಷ್ಟು ಜನ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಡಿವೋರ್ಸ್ ಘೋಷಿಸುವ ಮೂಲಕ ವಿಚ್ಛೇದನ ಪಡೆಯುವುದಾಗಿ ತಿಳಿಸಿದ್ದರು. ಇದೀಗ ದಕ್ಷಿಣ ಭಾರತದ ಮ್ಯೂಸಿಕ್ ಡೈರೆಕ್ಟರ್ ಕಂ ಆಕ್ಟರ್ ಜಿವಿ ಪ್ರಕಾಶ್ ಸಾಮಾಜಿಕ ಜಾಲತಾಣದಲ್ಲಿ ವಿಚ್ಚೇದನದ ವಿಚಾರ ಹಂಚಿಕೊಂಡಿದ್ದಾರೆ.
ತುಂಬಾ ಯೋಚನೆ ಮಾಡಿ ಈ ನಿರ್ಧಾರ ಕೈಗೊಳ್ಳುತ್ತಿದ್ದೇವೆ. ಮಾನಸಿಕ ನೆಮ್ಮದಿಗಾಗಿ ನಾನು ಮತ್ತು ಸೈಂಧವಿ ಬೇರಾಗುವ ತೀರ್ಮಾನ ಮಾಡಿದ್ದೇದೆ. ನಮ್ಮಿಬ್ಬರ ನಿರ್ಧಾರ ಮತ್ತು ಖಾಸಗಿತನವನ್ನ ನೀವೆಲ್ಲರೂ ಗೌರವಿಸಬೇಕು ಅಂತ ಸ್ನೇಹಿತರು, ಅಭಿಮಾನಿಗಳು ಸೇರಿದಂತೆ ಮಾಧ್ಯಮ ಮಿತ್ರರಿಗೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ. 11 ವರ್ಷಗಳ ತಮ್ಮ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ್ದಾರೆ.
ಅಂದ್ಹಾಗೇ, ಜಿವಿ ಪ್ರಕಾಶ್ ಹಾಗೂ ಸೈಂಧವಿ ಪರಸ್ಪರ ಪ್ರೀತಿಸಿ ಮದುವೆಯಾದವರು. ಎಲ್ಲದಕ್ಕಿಂತ ಹೆಚ್ಚಾಗಿ ಬಾಲ್ಯ ಸ್ನೇಹಿತರು ಕೂಡ. 2013 ರಲ್ಲಿ ಬಾಳಪಯದಲ್ಲಿ ಜೊತೆಯಾದ ಈ ಜೋಡಿ, ತಮ್ಮಿಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ 2020 ರಲ್ಲಿ ಮಗು ಮಾಡ್ಕೊಂಡಿದ್ದರು. ಆ ಪುಟ್ಟ ಕಂದನಿಗೆ ಈಗ 4 ವರ್ಷ. ಈ ಸಮಯದಲ್ಲಿ ಈ ಜೋಡಿ ಬೇರ್ಪಡುವ ನಿರ್ಧಾರ ಮಾಡಿದೆ. ಸುಂದರ ಸಂಸಾರಕ್ಕೆ ಎಳ್ಳು ನೀರು ಬಿಡಲು ತೀರ್ಮಾನಿಸಿದೆ. ಈ ಜೋಡಿಯ ನಿರ್ಧಾರ ಅಭಿಮಾನಿಗಳನ್ನ ಶಾಕ್ ಗೆ ಒಳಪಡಿಸಿದೆ.
ಜಿವಿ ಪ್ರಕಾಶ್ ಅವರು ಆಸ್ಕರ್ ಪ್ರಶಸ್ತಿ ವಿಜೇತರಾದ ಎ ಆರ್ ರೆಹಮಾನ್ ಅವರಿಗೆ ಅಳಿಯ ಆಗಬೇಕು. ಸೂರರೈ ಪೋಟ್ರು, ತಲೈವಿ, ಕ್ಯಾಪ್ಟನ್ ಮಿಲ್ಲರ್, ಥೇರಿ, ಸೆಲ್ಫೀ ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ಸಂಯೋಜಿಸುವ ಮೂಲಕ ಸೆನ್ಸೇಷನಲ್ ಮ್ಯೂಸಿಕ್ ಡೈರೆಕ್ಟರ್ ಆಗಿ ಗುರ್ತಿಸಿಕೊಂಡಿದ್ದಾರೆ. ತೆಲುಗು ಅಂಡ್ ತಮಿಳು ಪ್ರಾಜೆಕ್ಟ್ ನಲ್ಲಿ ಸಂಗೀತ ನಿರ್ದೇಶಕನಾಗಿ ಮತ್ತು ನಟನಾಗಿಯೂ ಬ್ಯುಸಿಯಾಗಿದ್ದಾರೆ. ಇತ್ತ ಸೈಂಧವಿ ಸಿಂಗರ್ ಆಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸೂಪರ್ ಸೂಪರ್ ಹಿಟ್ ಗೀತೆಗಳಿಗೆ ಕಂಠದಾನ ಮಾಡಿ ಹೆಸರು ಮಾಡಿದ್ದಾರೆ. ಇದೀಗ ದಾಂಪತ್ಯ ಜೀವನ ಕೊನೆಗೊಳಿಸುಕೊಳ್ತಿರೋ ವಿಚಾರಕ್ಕೆ ಈ ಜೋಡಿ ಬಿಗ್ ಬ್ರೇಕಿಂಗ್ ನ್ಯೂಸ್ ಆಗಿದೆ.