“ಹನುಮಾನ್” ಸಿನಿಮಾದ ಮೂಲಕ ಸಕ್ಸಸ್ ಕಂಡಿರುವ ತೆಲುಗಿನ ಯುವ ನಟ ತೇಜ್ ಸಜ್ಜಾ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ. “ಕಾರ್ತಿಕೇಯ”, “ಕಾರ್ತಿಕೇಯ-2”, “ಧಮಾಕ” ಸೇರಿದಂತೆ ಹಲವು ಹಿಟ್ ಸಿನಿಮಾ ಕೊಟ್ಟಿರುವ ಕಾರ್ತಿಕ್ ಗಟ್ಟಮ್ನೇನಿ ಅವರು ತೇಜ್ ಸಜ್ಜಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಹೊಸ ಜೋಡಿಯ ಟೈಟಲ್ ಹಾಗೂ ಫಸ್ಟ್ ಝಲಕ್ ಬಿಡುಗಡೆ ಮಾಡಿದ್ದಾರೆ.
ಹನುಮಾನ್ ಸೂಪರ್ ಹೀರೋ ಆಗಿದ್ದ ತೇಜ್ಸಜ್ಜಾ ಈಗ ಸೂಪರ್ ಯೋಧನಾಗಿ ಪ್ರತ್ಯಕ್ಷರಾಗಿದ್ದಾರೆ. ಕೈಯಲ್ಲಿ ಸ್ಟಾಫ್ಟ್ ಸ್ಟಿಕ್ ಹಿಡಿದು ದುಷ್ಟರನ್ನು ಸಂಹರಿಸಲು ಪಣ ತೊಟ್ಟಿದ್ದಾರೆ. ಇದಕ್ಕಾಗ ತೇಜ್ ಸಜ್ಜಾ ಹೊಸ ಅವತಾರವನ್ನೇ ತಾಳಿದ್ದಾರೆ. ಕಾರ್ತೀಕ್ ಗಟ್ಟಮ್ನೇಮಿ ಹಾಗೂ ತೇಜ್ ಸಜ್ಜಾ ಸಿನಿಮಾ “ಮಿರಾಯ್” ಎಂದು ಟೈಟಲ್ ಇಡಲಾಗಿದೆ. “ಮಿರಾಯ್” ಎಂದರೆ “ಭವಿಷ್ಯ” ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಬಿಚ್ಚಿಡುವ “ಮಿರಾಯ್” ವಿಷ್ಯುಯಲ್ ಟ್ರೀಟ್ ನೋಡುಗರಿಗೆ ಹಬ್ಬದಂತಿದೆ.