ಬಾಲಿವುಡ್ ಕಿಂಗ್ ಖಾನ್ ಶಾರುಖ್ ಹೀಟ್ ಸ್ಟ್ರೋಕ್ನಿಂದ ಬಳಲುತ್ತಿದ್ದು, ಅಹಮದಾಬಾದ್ನ ಆಸ್ಪತ್ರೆಗೆ ದಾಖಲಿಸಲಾಗಿರುವ ಸುದ್ದಿ ಹೊರಬಿದ್ದಿತ್ತು. ಬಾಲಿವುಡ್ ಬಾದ್ ಷಾ ಅಭಿಮಾನಿಗಳನ್ನ ಆತಂಕ್ಕೀಡು ಮಾಡಿತ್ತು. ಇದೀಗ ಕಿಂಗ್ ಖಾನ್ ಆರೋಗ್ಯದ ಬಗ್ಗೆ ರಿಪೋರ್ಟ್ ಹೊರಬಿದ್ದಿದ್ದು, ಅಭಿಮಾನಿಗಳು ನಿಟ್ಟುಸಿರು ಬಿಡುವಂತಾಗಿದೆ
ಇತ್ತೀಚೆಗೆ ಅಹಮದಾಬಾದ್ನಲ್ಲಿ ನಡೆದ ಎಸ್ಆರ್ಎಚ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಜಯ ಗಳಿಸಿತ್ತು. ಆಗ ಶಾರುಖ್ ಖಾನ್ ಅವರು ಇಡೀ ಗ್ರೌಂಡ್ ಸುತ್ತಾಡಿದ್ದರು. ಅಭಿಮಾನಿಗಳತ್ತ ಕೈ ಬೀಸಿದ್ದರು. ಅಹಮದಾಬಾದ್ನಲ್ಲಿ ಸಾಕಷ್ಟು ಸೆಖೆ ಇದೆ. ಈ ಕಾರಣಕ್ಕೆ ಅವರಿಗೆ ಸನ್ ಸ್ಟ್ರೋಕ್ ಆಗಿರಬಹುದು ಎಂದು ಹೇಳಲಾಗ್ತಿದೆ.
ಇನ್ನೂ ನಟಿ ಹಾಗೂ ಕೆಕೆಆರ್ನ ಸಹ ಮಾಲೀಕರಾದ ಜೂಹಿ ಚಾವ್ಲಾ ಆಸ್ಪತ್ರೆಗೆ ತೆರಳಿ ಶಾರುಖ್ ಖಾನ್ ಆರೋಗ್ಯ ವಿಚಾರಿಸಿದ್ದಾರೆ. ಜೂಹಿ ಜೊತೆ ಅವರ ಪತಿ ಜಯ್ ಮೆಹ್ತಾ ಕೂಡ ಇದ್ದರು. ಖಾಸಗಿ ಚಾನಲ್ ಜೊತೆ ಮಾತನಾಡಿರುವ ಜೂಹಿ, ‘ಮೇ 21ರಂದು ಅವರಿಗೆ ಅನಾರೋಗ್ಯ ಕಾಡಿತ್ತು. ಆದಾಗ್ಯೂ ಅವರು ಮ್ಯಾಚ್ ವೀಕ್ಷಿಸಿದರು. ಈಗ ಅವರ ಆರೋಗ್ಯ ಸುಧಾರಿಸುತ್ತಿದೆ. ಅವರು ಶೀಘ್ರವೇ ಸಂಪೂರ್ಣ ಚೇತರಿಕೆ ಕಾಣಲಿದ್ದಾರೆ. ಫಿನಾಲೆ ವೀಕ್ಷಿಸಲಿದ್ದಾರೆ’ ಎಂದಿದ್ದಾರೆ.