“ಕಾಗೆಬಂಗಾರ” ಕಳೆದ ಒಂಭತ್ತು ವರ್ಷಗಳಿಂದ ಕನ್ನಡ ಕಲಾಭಿಮಾನಿಗಳ ಕಣ್ಣರಳಿಸಿರೋ ಸಿನಿಮಾ. ಫೈನಲೀ, ಸೂರಿ ಸಾಹೇಬ್ರು ಕಾಗೆಬಂಗಾರ ಕೈಗೆತ್ತಿಕೊಂಡಿದ್ದಾರೆ. ದಿವ್ಯ ಮುಹೂರ್ತ ಫಿಕ್ಸ್ ಮಾಡಿ, ಕಾಗೆಬಂಗಾರಕ್ಕೆ ಚಾಲನೆ ಕೊಡಲು ನಿರ್ಧರಿಸಿದ್ದಾರೆ. ಕಿಸ್ ಹೀರೋ ವಿರಾಟ್ ನಾಯಕನಟರಾಗಲಿದ್ದು, ದುನಿಯಾ ವಿಜಯ್ ಪುತ್ರಿ ರಿತನ್ಯ ವಿಜಯ್ ನಾಯಕಿಯಾಗಿದ್ದಾರೆ. ಇದೇ ಮೊದಲ ಭಾರಿಗೆ ಇಬ್ಬರು ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ.
ವಿಜಯ್ ಪುತ್ರಿ ರಿತನ್ಯಾಗೆ ಇದು ಎರಡನೇ ಸಿನಿಮಾ. ಜಡೇಶ್ ಕೆ ಹಂಪಿ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾದಲ್ಲಿ ರಿತನ್ಯಾ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಪರಿಚಯಿಸಿಕೊಳ್ತಿದ್ದಾರೆ. ಮೂಲ ಹೆಸರು ಮೋನಿಕಾ, ಆದರೆ ಸಿನಿಮಾಗಾಗಿ ರಿತನ್ಯಾ ಎಂದು ಬದಲಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅದ್ದೂರಿಯಾಗಿ ಸಿನಿಮಾದ ಮುಹೂರ್ತ ನೆರವೇರಿತ್ತು.
ಇಂಟ್ರೆಸ್ಟಿಂಗ್ ಅಂದರೆ ಈ ಚಿತ್ರದಲ್ಲಿ ವಿಜಯ್ ನಾಯಕರಾಗಿದ್ದು, ಪುತ್ರಿ ರಿತನ್ಯ ಮಗಳಾಗಿ ಕಾಣಿಸಿಕೊಳ್ತಿದ್ದಾರೆ. ರಿಯಲ್ ಲೈಫ್ ಅಪ್ಪ-ಮಗಳು, ರೀಲ್ನಲ್ಲಿ ತಂದೆ-ಮಗಳಾಗಿ ಕಮಾಲ್ ಮಾಡೋದಕ್ಕೆ ಹೊರಟಿದ್ದಾರೆ. ಶೀಘ್ರದಲ್ಲೇ ಸಿನಿಮಾದ ಶೂಟಿಂಗ್ ಶುರುವಾಗಲಿದ್ದು, ಒಟ್ಟಿಗೆ ಅಖಾಡಕ್ಕಿಳಿಯಲಿದ್ದಾರೆ. ಈ ಬೆನ್ನಲ್ಲೇ ರಿತನ್ಯಾಗೆ ಸುಕ್ಕಾ ಸೂರಿ ಸಿನಿಮಾದಲ್ಲಿ ಮಿಂಚೋದಕ್ಕೆ ಚಾನ್ಸ್ ಸಿಕ್ಕಿದೆ.
ಬ್ಯಾಡ್ ಮ್ಯಾನರ್ಸ್ ಸಿನಿಮಾದ ನಂತರ ಸೂರಿ ಸಾಹೇಬ್ರು ಯಾವ್ ಸಿನಿಮಾ ಕೈಗೆತ್ತಿಕೊಳ್ಳಬಹುದು ಎನ್ನುವ ನಿರೀಕ್ಷೆಯಿತ್ತು. ಆ ನಿರೀಕ್ಷೆಗೆ ಉತ್ತರ ಸಿಕ್ಕಿದೆ. ಕೆಂಡಸಂಪಿಗೆಯಲ್ಲಿ ಕಾಗೆಬಂಗಾರದ ಸುಳಿವು ನೀಡಿದ್ದ ಸೂರಿಯವರು ಕೊನೆಗೂ ಕನ್ನಡ ಕಲಾಭಿಮಾನಿಗಳಿಗೆ ಕಾಗೆಬಂಗಾರ ಪರಿಚಯಿಸಲು ಹೊರಟಿದ್ದಾರೆ. ಜಯಣ್ಣ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಳ್ತಿದ್ದು ಜಯಣ್ಣ ಮತ್ತು ಭೋಗೇಂದ್ರ ಬಂಡವಾಳ ಹೂಡ್ತಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರಕ್ಕಿದ್ದು, ಸೂರಿ ಮತ್ತು ಆಮ್ರಿ ಸುರೇಂದ್ರನಾಥ್ ಕಥೆ ಬರೆಯುವಲ್ಲಿ ನಿರತರಾಗಿದ್ದಾರೆ.ಇದೇ ಜೂನ್ ತಿಂಗಳಲ್ಲಿ ಮುಹೂರ್ತ ಮಾಡಿ, ಸಿನಿಮಾಗೆ ಚಾಲನೆ ನೀಡಲು ಸಿದ್ದತೆ ಮಾಡಿಕೊಳ್ಳಲಾಗ್ತಿದೆ.