ಕನ್ನಡದ ವಿಕ್ರಾಂತ್ ರೋಣ ಸಿನಿಮಾದಲ್ಲಿ ರಾರಾ ರಕ್ಕಮ್ಮ ಎಂದು ಪಡ್ಡೆಹುಡುಗರ ನಿದ್ದೆಗೆಡಿಸಿದ ಬಾಲಿವುಡ್ ನಟಿ ಜಾಕ್ವೆಲಿನ್ ಇದೀಗ ಹಾಲಿವುಡ್ನತ್ತ ಮುಖ ಮಾಡಿದ್ದಾರೆ. ಕಿಲ್ ದೆಮ್ ಆಲ್ 2 ಎನ್ನುತ್ತಾ ನಟಿ ಆಕ್ಷನ್ ಅವತಾರ ತಾಳಿದ್ದಾರೆ.
ಜಾಕ್ವೆಲಿನ್ ನಟಿಸಿದ ಮೊದಲ ಹಾಲಿವುಡ್ ಸಿನಿಮಾ ಕಿಲ್ ದಮ್ ಆಲ್ 2 ಚಿತ್ರದ ಟ್ರೈಲರ್ಗೆ ರಿಲೀಸ್ ಆಗಿ ಸಿನಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಹೀರೋ ಜೀನ್ ಕ್ಲೌಡ್ ವ್ಯಾನ್ ಡೆಮೆಗೆ ನಾಯಕಿಯಾಗಿ ಜಾಕ್ವೇಲಿನ್ ಕಾಣಿಸಿಕೊಂಡಿದ್ದಾರೆ ಗನಗಗಗ ಹಿಡಿದು ನಟಿ ಅಖಾಡಕ್ಕೆ ಕೂಡ ಇಳಿದಿದ್ದಾರೆ. ಈ ಸಿನಿಮಾ ಮೊದಲ ಸರಣಿ 2017 ರಲಲಿ ಸೂಪರ್ ಹಿಟ್ ಆಗಿತ್ತು.
ನಟಿಯ ಮೊದಲ ಹಾಲಿವುಡ್ ಚಿತ್ರವಾಗಿದ್ರೂ ಆತ್ಮವಿಶ್ವಾಸದಿಂದ ನಟಿಸಿದ್ದಾರೆ. ಬಿಟ್ಟಿರುವ ಟ್ರೈಲರ್ ನೋಡುಗರಿಗೆ ಇಂಟರೆಸ್ಟಿಂಗ್ ಎನಿಸಿದೆ. ಎಂದು ನಟಿಸಿರದ ವಿಭಿನ್ನ ಗೆಟಪ್ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.