ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಮಾತ್ರವಲ್ಲ ಸಮಸ್ತ ಕನ್ನಡ ಸಿನಿಮಾ ಪ್ರೇಮಿಗಳೆಲ್ಲರು ಖುಷಿ ಪಡುವಂತಹ, ಹೆಮ್ಮೆ ಪಡುವಂತಹ ಸುದ್ದಿ ಇದು. ಯಾಕಂದ್ರೆ ಇದೇ ಮೊದಲ ಭಾರಿಗೆ ಕನ್ನಡ ಚಿತ್ರರಂಗದಿಂದ ಐಎಂಡಿಬಿ ಟಾಪ್ 100 ಪಟ್ಟಿ ಸೇರಿದವರ ಪೈಕಿ ರಾಕಿಭಾಯ್ ಮೊದಲಿಗರಾಗಿದ್ದಾರೆ. ಕಳೆದ 10 ವರ್ಷಗಳಲ್ಲಿ ಅಂದರೆ 2014 ರ ಏಪ್ರಿಲ್ ತಿಂಗಳಿಂದ 2024 ರ ಏಪ್ರಿಲ್ ವರೆಗೆ ಐಎಂಡಿಬಿ ವೆಬ್ ಸೈಟ್ ನಲ್ಲಿ ಸೆಲೆಬ್ರಿಟಿಗಳ ಪ್ರೊಫೈಲ್ ಪುಟಕ್ಕೆ ಎಷ್ಟು ಜನರು ಭೇಟಿ ನೀಡಿದ್ದಾರೆ ಎಂಬುದರ ಆಧಾರದ ಮೇಲೆ ಈ ಪಟ್ಟಿ ಸಿದ್ದವಾಗಿದೆ. ಟಾಪ್ 100 ನಲ್ಲಿ ಮಾನ್ ಸ್ಟಾರ್ ಯಶ್ 89 ನೇ ಸ್ಥಾನದಲ್ಲಿದ್ದಾರೆ. ಭಾರತೀಯ ಸೆಲೆಬ್ರಿಟಿಗಳಿಗೆ ಪೈಪೋಟಿ ಕೊಟ್ಟು ಕೊನೆಗೂ ಪ್ರತಿಷ್ಠಿತ ಪಟ್ಟಿಯಲ್ಲಿ ಸೇರ್ಪಡೆಗೊಂಡ ಏಕೈಕ ಕನ್ನಡಿಗ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ನಿಮಗೆಲ್ಲ ಗೊತ್ತಿರುವ ಹಾಗೇ ಯಶ್ ಈಗ ಪ್ಯಾನ್ ಇಂಡಿಯಾಗೆ ಮಾತ್ರ ಸೀಮಿತವಾಗಿಲ್ಲ ಬದಲಾಗಿ ಪ್ಯಾನ್ ವರ್ಲ್ಡ್ ಮುಟ್ಟಿದ್ದಾರೆ. ಗ್ಲೋಬಲ್ ಮಟ್ಟದಲ್ಲಿ ಗುರ್ತಿಸಿಕೊಂಡು ಮುನ್ನುಗುತ್ತಿದ್ದಾರೆ. ಕೆಜಿಎಫ್ ಮೂಲಕ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಸದ್ದು ಸುದ್ದಿ ಮಾಡಿದಂತಹ ರಾಕಿಭಾಯ್ ಈಗ ಟಾಕ್ಸಿಕ್ ಮೂಲಕ ಇಡೀ ವರ್ಲ್ಡ್ ಗೆ ಕನ್ನಡ ಚಿತ್ರರಂಗದ ತಾಕತ್ತೇನು ಅನ್ನೋದನ್ನ ಪ್ರೂ ಮಾಡಲಿಕ್ಕೆ ಹೊರಟು ನಿಂತಿದ್ದಾರೆ. ಈಹೊತ್ತಲ್ಲಿ ಪ್ರತಿಷ್ಠಿತ ಐಎಂಡಿಬಿ ಪಟ್ಟಿ ಹೊರಬಿದ್ದಿದ್ದು ಯಶ್ ಫ್ಯಾನ್ಸ್ ಜೊತೆಗೆ ಇಡೀ ಸ್ಯಾಂಡಲ್ ವುಡ್ ಹುಬ್ಬೇರಿಸುವಂತಾಗಿದೆ
ಇನ್ನೊಂದು ವಿಶೇಷ ಅಂದರೆ ಈ ಟಾಪ್ 100 ಭಾರತೀಯ ಸೆಲಬ್ರಿಟಿಗಳ ಪಟ್ಟಿಯಲ್ಲಿ ಕನ್ನಡತಿ ಕಂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಬಾಲಿವುಡ್ನ ತ್ರಿವಳಿ ಖಾನ್ ಗಳನ್ನ ಹಿಂದಿಕ್ಕಿರುವ ದೀಪಿಕಾ ಅಗ್ರಸ್ಥಾನ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನಿಂದ ಬಿಟೌನ್ ಗೆ ಕಾಲಿಟ್ಟ ಡಿಪ್ಪಿ ಗಾಡ್ ಫಾದರ್ ಗಳಿಲ್ಲದೇ ಬೆಳೆದು ನಿಂತಿದ್ದಾರೆ. ಹಿಂದಿ ಮಾತ್ರವಲ್ಲದೇ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಖ್ಯಾತಿ ಪಡೆದು, ಹಾಲಿವುಡ್ ಲೋಕದಲ್ಲೂ ಮಿಂಚಿದ್ದಾರೆ. ಇಂತಿಪ್ಪ ಡಿಪ್ಪಿ ಈಗ ಮೊದಲ ಮಗುವಿನ ನಿರೀಕ್ಷೆಯಲಿದ್ದಾರೆ. ಡಾರ್ಲಿಂಗ್ ಪ್ರಭಾಸ್ ಅಭಿನಯದ ಕಲ್ಕಿ ಹಾಗೂ ಸಿಂಗಂ ಅಗೇನ್ ಸಿನಿಮಾಗಳನ್ನೂ ಎದುರುನೋಡ್ತಿದ್ದಾರೆ
ಅಂದ್ಹಾಗೇ, ಈ ಐಎಂಡಿಬಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ದೀಪಿಕಾ ಪಡುಕೋಣೆ ಇದ್ದರೆ, ಎರಡನೇ ಸ್ಥಾನದಲ್ಲಿ ಶಾರುಖ್ ಖಾನ್, ಮೂರನೇ ಸ್ಥಾನ ಐಶ್ವರ್ಯಾ ರೈ ಬಚ್ಚನ್, 4ನೇ ಸ್ಥಾನದಲ್ಲಿ ಆಲಿಯಾ ಭಟ್, 5ನೇ ಸ್ಥಾನದಲ್ಲಿ ಇರ್ಫಾನ್ ಖಾನ್ ಇದ್ದಾರೆ. ಆಮಿರ್ ಖಾನ್ ಅವರಿಗೆ 6ನೇ ಸ್ಥಾನ, 7ನೇ ಸ್ಥಾನದಲ್ಲಿ ಸುಶಾಂತ್ ಸಿಂಗ್ ರಜಪೂತ್, 8ನೇ ಸ್ಥಾನದಲ್ಲಿ ಸಲ್ಮಾನ್ ಖಾನ್, 9ನೇ ಸ್ಥಾನದಲ್ಲಿ ಹೃತಿಕ್ ರೋಷನ್ ಹಾಗೂ 10ನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್ ರಾರಾಜಿಸಿದ್ದಾರೆ.
ಬರೀ ಬಾಲಿವುಡ್ ಸೆಲೆಬ್ರಿಟಿಗಳು ಮಾತ್ರವಲ್ಲ ಸೌತ್ ಸಿನಿಮಾ ಇಂಡಸ್ಟ್ರಿಯಿಂದ ಸೂಪರ್ ಸ್ಟಾರ್ ರಜನಿಕಾಂತ್, ಮೋಹನ್ ಲಾಲ್, ಆರ್ ಮಾಧವನ್, ಕಮಲ್ ಹಾಸನ್, ಅಜಿತ್, ವಿಕ್ರಮ್ ಸೇರಿದಂತೆ ಕಿರಿಕ್ ಬ್ಯೂಟಿ ರಶ್ಮಿಕಾ ತನಕ ಹಲವು ನಟ ನಟಿಯರು ಅತೀ ಹೆಚ್ಚು ವೀಕ್ಣಣೆಗೊಳಪಟ್ಟು ಐಎಂಡಿಬಿ ಪಟ್ಟಿ ಸೇರ್ಪಡೆಗೊಂಡಿದ್ದಾರೆ.