- ದರ್ಶನ್ ಪ್ರಕರಣ ತನಿಖೆಗೆ ನಾನು ಕಾಮೆಂಟ್ಸ್ ಹೇಳುವುದು ಸರಿಯಲ್ಲ
ಶಿವಮೊಗ್ಗ: ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ಅಭಿನಯದ ಗೌರಿ ಚಲನಚಿತ್ರದ ಪ್ರಮೋಷನ್ ಗಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್, ಪುತ್ರ ಸಮರ್ಜಿತ್ ಲಂಕೇಶ್, ನಾಯಕ ನಟಿ ಸಾನಿಯಾ ಅಯ್ಯರ್ ಶಿವಮೊಗ್ಗಕ್ಕೆ ಆಗಮಿಸಿದ್ದರು.
ಸಿನಿಮಾ ಕುರಿತು ಸುದ್ದಿಗೋಷ್ಠಿ ನಡೆಸಿದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು, ಗೌರಿ ಎಂಬ ಹೆಸರಿನ ಚಲನಚಿತ್ರ ನಿರ್ಮಾಣ ಮಾಡಿದ್ದೇವೆ. ಇನ್ನೇನು ಬಿಡುಗಡೆ ಹಂತಕ್ಕೆ ಬಂದಿದೆ. ಸಿನಿಮಾ ಕೂಡ ದೊಡ್ಡ ಬಜೆಟಿನ ಸಿನಿಮಾವಾಗಿದೆ. ಯಾವುದಕ್ಕೂ ಕೊರತೆ ಇಲ್ಲ. ಐದು ಜನ ಸಂಗೀತ ನಿರ್ದೇಶಕರು ಈ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ಮಾಥ್ಯು, ಕೆ ಲ್ಯಾಣ್, ಸೇರಿದಂತೆ ಐದು ಜನ ಸಂಗೀತ ನಿರ್ದೇಶಕರಿದ್ದಾರೆ ಎಂದರು.
ಇನ್ನೂ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು, ದರ್ಶನ್ ಪ್ರಕರಣ ತನಿಖೆ ಹಂತದಲ್ಲಿದೆ. ನಾನು ಕಾಮೆಂಟ್ಸ್ ಹೇಳುವುದು ಸರಿಯಲ್ಲ. ಕಾಮೆಂಟ್ಸ್ ಗೆ ಜಗತ್ತಿನ ಡೊಂಕು ತಿದ್ದುವ ಬಸಣ್ಣನವರ ವಚನ ಹೇಳಿ, ಕಾಮೆಂಟ್ಸ್ ಮಾಡಲು ನಿರಾಕರಿಸಿದರು.