ಸ್ಯಾಂಡಲ್ ವುಡ್ ಅಂಗಳದಲ್ಲಿ ಟೈಟಲ್ ನಿಂದನೇ ಸದ್ದು ಮಾಡ್ತಿರೋ ಸಿನಿಮಾಗಳ ಪೈಕಿ ‘ ಅಧಿಪತ್ರ’ ಕೂಡ ಒಂದು. ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಹಾಗೂ ಜಾಹ್ನವಿ ಕಾರ್ತಿಕ್ ಜೋಡಿಯಾಗಿ ನಟಿಸಿರೋ ಅಧಿಪತ್ರ ರಿಲೀಸ್ ಗೆ ಸಜ್ಜಾಗ್ತಿದೆ ಚಿತ್ರದ ಆಡಿಯೋ ರೈಟ್ಸ್ ದುಬಾರಿ ಮೊತ್ತಕ್ಕೆ ಸೇಲಾಗಿದೆ.
ಪ್ರತಿಷ್ಠಿತ ಲಹರಿ ಸಂಸ್ಥೆ ಅಧಿಪತ್ರ ಆಡಿಯೋ ಹಕ್ಕುಗಳನ್ನ ಕೊಂಡುಕೊಂಡಿದ್ದು, ಮೇ 10 ರಂದು ಅಧಿಪತ್ರದ ಝಲಕ್ ನ ತಮ್ಮ ಆಡಿಯೋ ಸಂಸ್ಥೆ ಮೂಲಕ ರಿವೀಲ್ ಮಾಡಲಿದೆಯಂತೆ. ಇದೇ ದಿನ ಟೀಸರ್ ಕೂಡ ಹೊರಬರಲಿದೆ.
ಇನ್ನೂ ಈ ಚಿತ್ರಕ್ಕೆ ಯುವ ನಿರ್ದೇಶಕ ಚಯನ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ಆಡ್ ಇಂಡಸ್ಟ್ರಿ ನಲ್ಲಿ ಕ್ರಿಯೇಟಿವ್ ಆಡ್ಸ್ ಮೂಲಕ ಗಮನ ಸೆಳೆದಿದ್ದರು. ಚಯನ್ ಶೆಟ್ಟಿ ಈಗ ಅಧಿಪತ್ರದ ಮೂಲಕ ಸಿನಿಮಾ ಲೋಕದಲ್ಲಿ ನಿರ್ದೇಶಕನಾಗಿ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ.
ನಾಯಕನಟ ರೂಪೇಶ್ ಶೆಟ್ಟಿ ಖಾಕಿ ಖದರ್ ತೋರಿಸಲಿದ್ದು, ಜಾಹ್ನವಿ ನಾಯಕಿಯಾಗಿ ಮೋಡಿ ಮಾಡಲಿದ್ದಾರೆ. ಕಾಂತಾರ ಖ್ಯಾತಿಯ ಪ್ರಕಾಶ್ ತುಮಿನಾಡು, ರಘು ಪಾಂಡೇಶ್ವರ್, ಎಂಕೆ ಮಠ, ದೀಪಕ್ ರೈ, ಅನಿಲ್ ಉಪ್ಪಾಲ್, ಕಾರ್ತಿಕ್ ಭಟ್, ಪ್ರಶಾಂತ್ ತಾರಾಬಳಗದಲ್ಲಿದ್ದಾರೆ.
ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಅಧಿಪತ್ರ ಸಿನಿಮಾವನ್ನು ಕೆ ಆರ್ ಸಿನಿಕಂಬೈನ್ಸ್ ಬ್ಯಾನರ್ನಡಿ ದಿವ್ಯಾ ನಾರಾಯಣ್, ಕುಲದೀಪ್ ರಾಘವ್ ಲಕ್ಷ್ಮೇ ಗೌಡ ಬಂಡವಾಳ ಹೂಡಿದ್ದು, ಕಾರ್ತಿಕ್ ಶೆಟ್ಟಿ ಹಾಗೂ ಸತೀಶ್ ಶೆಟ್ಟಿ ಸಹ ನಿರ್ಮಾಣದಲ್ಲಿ ಹೆಗಲು ಕೊಟ್ಟಿದ್ದಾರೆ. ಕಂಟೆಂಟ್ ಹಾಗೂ ಮೇಕಿಂಗ್ ನಿಂದ ಸೌಂಡ್ ಮಾಡ್ತಿರೋ ಅಧಿಪತ್ರ ಚಿತ್ರ, ಈಗ ಆಡಿಯೋ ರೈಟ್ಸ್ ನಿಂದ ಸುದ್ದಿಮನೆಯಲ್ಲಿ ಸಖತ್ ಸದ್ದು ಮಾಡ್ತಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ.