ಈಶಾ ಅಂಬಾನಿ ಆಪ್ತ ಸ್ನೇಹಿತೆಯಾಗಿರೋ ಜಾನ್ಹವಿ ಕಪೂರ್ ಅನಂತ್ ಅಂಬಾನಿ ಮದುವೆಯಲ್ಲಿ ಬಂಗಾರದ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಫ್ರೀ ವೆಡ್ಡಿಂಗ್ನಿಂದ ಹಿಡಿದು ಮದುವೆಯವರೆಗೆ ಎಲ್ಲಾ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದ ಜಾನ್ಹವಿ ವಿಭಿನ್ನ ಉಡುಗೆಯಿಂದ ಎಲ್ಲರ ಗಮನ ಸೆಳೆದರು.
ವಿದೇಶಿ ನಟ-ನಟಿಯರು, ಗಾಯಕರನ್ನು ಹೊರತು ಪಡಿಸಿದರೆ, ಅಂಬಾನಿ ಮಗನ ಮದುವೆಯಲ್ಲಿ ಸಖತ್ ಮಿಂಚಿರುವುದು ಜಾನ್ಹವಿ ಕಪೂರ್ ಎನ್ನಲಾಗಿದೆ. ಮದುವೆ ಕಾರ್ಯಕ್ರಮದಲ್ಲಿ ಜಾನ್ಹವಿ ತೊಟ್ಟಿದ್ದ ದುಬಾರಿ ಬೆಲೆಯ ಲೆಹೆಂಗಾ ಎಲ್ಲರ ಹುಬ್ಬೆರುವಂತೆ ಮಾಡಿದೆ. ಜಾನ್ಹವಿ ಚಿನ್ನದಿಂದಲೇ ಮಾಡಿದ್ದ ಬಟ್ಟೆ ತೊಟ್ಟಿದ್ದಾರೆನೋ ಎನ್ನುವಂತಹ ಭಿನ್ನ ಡಿಸೈನ್ನ ಲೆಹೆಂಗಾ ತೊಟ್ಟಿದ್ದರು. ಆದರೆ ಜಾನ್ಹವಿ ತೊಟ್ಟಿರುವುದು ಚಿನ್ನದಿಂದ ಮಾಡಿದ್ದ ಬಟ್ಟೆಯಲ್ಲ, ಬದಲಿಗೆ ಅದರಂತೆ ಕಾಣುವ ಲೆಹಂಗಾ ಉಡುಪು ಆಗಿದೆ. ಹಾಗೂ ಜಾನ್ಹವಿ ಕಪೂರ್ ತಮ್ಮ ಬಾಯ್ ಪ್ರೆಂಡ್ ಶಿಖರ್ ಫಾರಿಯಾ ಜೊತೆಗೆ ಈ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.