ಬಹು ಭಾಷೆ ನಟಿ ಶ್ರೀದೇವಿ ಅವ್ರು ಅನೇಕ ಚಿತ್ರಗಳನ್ನ ಸಿನಿಮಾ ರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವರ ಅಂದಕ್ಕೆ ಮನ ಸೋತವರೇ ಇಲ್ಲ. ಈ ಬ್ಯೂಟಿ ಚೆನ್ನೈನಲ್ಲಿ ಮೊದಲ ಮನೆ ಖರೀದಿಸಿದ್ರು.
ಶ್ರೀದೇವಿ ಅವರ ಸಾವು ಎಲ್ಲರ ಮನಸ್ಸನ್ನು ಕೆರಳಸಿತ್ತು. ಅವ್ರು ಎಲ್ಲರನ್ನು ಬಿಟ್ಟು ಅಗಲಿದ ಮೇಲೆ ಅವರ ಚೆನ್ನೈನ ಮನೆ ಖಾಲಿ ಇತ್ತು. ಈಗ ಅವರ ಮಗಳು ಜಾನ್ವಿ ಕಪೂರ್ ಸಿನಿಮಾ ರಂಗದಲ್ಲಿ ಅವರದ್ದೇ ಆದ ಛಾಪು ಮೂಡಿಸಿದ್ದಾರೆ. ಈಗ ಎಲ್ಲರಿಗೂ ಶ್ರೀದೇವಿ ಕುಟುಂಬ ಒಂದು ಬಂಪರ್ ಆಫರ್ ಕೊಟ್ಟಿದೆ. ಚೆನ್ನೈನ ಮನೆಯನ್ನು ಹೋಟೆಲ್ ಆಗಿ ಪರಿವರ್ತಿಸಬೇಕು ಎನ್ನುವ ಕನಸು ಶ್ರೀದೇವಿಗೆ ಇತ್ತು. ಜಾನ್ವಿ ಕಪೂರ್ ಮತ್ತು ಬೋನಿ ಕಪೂರ್ ಒಟ್ಟಾಗಿ ಶ್ರೀದೇವಿಯ ಈ ಕನಸನ್ನು ನನಸಾಗಿಸಿದ್ದಾರೆ.
ಅಮೇರಿಕದ ಹೋಂ ಸ್ಟೇ ಕಂಪನಿಯಾದ ಏರ್ ಬಿ ಎನ್ ಬಿ ( Airbnb) ಯಲ್ಲಿ ಚೆನ್ನೈನಲ್ಲಿರುವ ಶ್ರೀದೇವಿ ಅವರ ಬಂಗಲೆಯನ್ನು ಐಕಾನಿಕ್ ವರ್ಗದಲ್ಲಿ ಪಟ್ಟಿ ಮಾಡಿದೆ. ಈ ವರ್ಗದಲ್ಲಿ ಪಟ್ಟಿ ಮಾಡಲಾದ ಬಂಗಲೆಗಳ ದರಗಳು $100 ಅಡಿಯಲ್ಲಿವೆ. ಆದರೆ, ವಾಸ್ತವ್ಯದ ವೆಚ್ಚವನ್ನು ಇನ್ನೂ ಬಹಿರಂಗಪಡಿಸಿಲ್ಲ. ಮೇ 12 ರಿಂದ ನೀವು ನಿಮ್ಮ ಫ್ರೆಂಡ್ಸ್ ಮತ್ತು ಫ್ಯಾಮಿಲಿ ಜೊತೆ ಶ್ರೀದೇವಿ ಅವರ ಮನೆಯಲ್ಲಿ ಸಮಯ ಕಳೆಯಲು ಬುಕ್ ಮಾಡಬಹುದು.
ನನ್ನ ಮತ್ತು ತಂದೆಯ ಹುಟ್ಟುಹಬ್ಬವನ್ನೂ ಆ ಮನೆಯಲ್ಲಿ ಆಚರಿಸಲಾಗಿದೆ. ಆದರೆ ಅಮ್ಮನ ನಿರ್ಗಮನದ ನಂತರ, ನಾವು ಆ ಮನೆಯಲ್ಲಿ ಹೆಚ್ಚು ಇರಲು ಸಾಧ್ಯವಾಗಲಿಲ್ಲ. ನಮ್ಮ ಅಮ್ಮನ ಆಸೆಯಂತೆ ಆ ಮನೆಯನ್ನು ಹೋಂ ಸ್ಟೇಯಾಗಿ ಪರಿವರ್ತಸಿದ್ದಿವಿ ಎಂದು ಹೇಳಿಕೊಂಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷ್ ಆಗಿದ್ದಾರೆ.