ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ತಮ್ಮ ಬೋಲ್ಡ್ ಲುಕ್ ಗಳಿಂದ ಪಡ್ಡೆ ಹುಡಗರ ನಿದ್ದೆಗೆಡಿಸ್ತಿದ್ದಾರೆ. ಈವಾಗ ವಿಡಯ ಏನ್ ಗೋತ್ತಾ ಮೊನ್ನೆ “ಮಿಸ್ಟರ್ ಆ್ಯಂಡ್ ಮಿಸಸ್ ಮಹಿʼ ಸಿನಿಮಾ ಪ್ರಚಾರದ ವೇಳೆ, ಜಾನ್ವಿ ಕಪೂರ್ ಬಾಲಿವುಡ್ ಮಂದಿಯ ಬಗ್ಗೆ ನೀಡಿರುವ ಸ್ಫೋಟಕ ಹೇಳಿಕೆಯೊಂದು ನೆಟ್ಟಿಗರ ಚರ್ಚೆಗೆ ಆಹಾರವಾಗಿದೆ.
ಕೆಲ ದಿನಗಳ ಹಿಂದೆ ನಟಿ ಪ್ರಿಯಾಮಣಿ ಪಾಪರಾಜಿಗಳಿಗೆ ಹಣ ನೀಡಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಕರೆಸಿಕೊಳ್ತಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದರು. ಈಗ ಜಾನ್ವಿ ಕಪೂರ್ ಕೂಡ ಈ ವಿಚಾರ ಬಗ್ಗೆಯೇ ಮಾತನಾಡಿದ್ದಾರೆ. ಕೆಲ ಸೆಲೆಬ್ರಿಟಿಗಳು ಮೊದಲೇ ಇಂತಹ ಸ್ಥಳಕ್ಕೆ ಬರುತ್ತಿದ್ದೇವೆ. ಫೋಟೋ ಕ್ಲಿಕ್ಕಿಸಲು ಬನ್ನಿ ಎಂದು ಪಾಪರಾಜಿಗಳಿಗೆ ಹೇಳಿರುತ್ತಾರೆ. ಅದರಂತೆ ಅವರು ಕೂಡ ಬರುತ್ತಾರೆ ಎಂದಿದ್ದಾರೆ ನಟಿ.
ನಾನು ಚಿತ್ರೀಕರಣಕ್ಕೆ ಹೋಗದಿದ್ದಾಗ, ನಾನು ನನ್ನ ವೈಯಕ್ತಿಕ ಕೆಲಸದಲ್ಲಿದ್ದಾಗ ಇವರೆಲ್ಲರ ಕಣ್ಣಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತೇನೆ ಎಂದಿದ್ದಾರೆ ಜಾನ್ವಿ. ಆದರೆ ಅವರಿಗೆ ನನ್ನ ಚಿತ್ರ ಬೇಕೆನಿಸದರೆ ನನ್ನ ಕಾರು ಹಿಂಬಾಲಿಸಿಕೊಂಡು ಬರುತ್ತಾರೆ. ಕಷ್ಟಪಟ್ಟು ನನ್ನ ಚಿತ್ರಗಳನ್ನು ತೆಗೆಯುತ್ತಾರೆ. ಏಕೆಂದರೆ,ಫೋಟೋಗ್ರಾಫರ್ ಪ್ರತಿ ಚಿತ್ರಕ್ಕೆ ಇಷ್ಟು ಹಣ ಪಡೆಯುತ್ತಾರೆ ಎಂದಿದ್ದಾರೆ.
ಬಿಟೌನ್ಲ್ಲಿ ಪ್ರತಿಯೊಬ್ಬ ಸೆಲೆಬ್ರಿಟಿಗೂ ಒಂದೊಂದು ರೇಟ್ ಇದೆ. ಸ್ಟಾರ್ ಕಲಾವಿದರು ಆಗಿದ್ದರೆ ಅವರ ಚಿತ್ರಗಳು ದೊಡ್ಡ ಬೆಲೆಗೆ ಸೇಲ್ ಆಗುತ್ತದೆ. ನಿಮ್ಮ ಬೆಲೆ ಹೆಚ್ಚಿದ್ದರೆ, ಅವರೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ, ನಿಮ್ಮ ಕಾರನ್ನು ಹಿಂಬಾಲಿಸುತ್ತಾರೆ. ದೊಡ್ಡ ಸ್ಟಾರ್ ಅಲ್ಲದಿದ್ದರೆ ನೀವೇ ಕರೆ ಮಾಡಿ ಅವರನ್ನು ಕರೆಸಿಕೊಳ್ಳಬೇಕಾಗುತ್ತದೆ. ಈ ರೀತಿ ಮಾಡುವವರು ಇದ್ದಾರೆ ಎಂದು ಜಾನ್ವಿ ಕಪೂರ್ ಬಾಲಿವುಡ್ ಮಂದಿ ಕೆಲಸದ ಬಗ್ಗೆ ಮಾತನಾಡಿದ್ದಾರೆ.