- ತಮಿಳಿನ ಸ್ಟಾರ್ ನಟ ಜಯಂ ರವಿ ದಾಂಪತ್ಯದಲ್ಲಿ ಬಿರುಕು
- ಆರತಿ ಅವರಿಗೆ ಡಿವೋರ್ಸ್ ನೀಡಲು ಮುಂದಾದ ನಟ ಜಯಂ ರವಿ
ಸಿನಿಮಾ ರಂಗದಲ್ಲಿ ಡಿವೋರ್ಸ್ ಕೇಸ್ಗಳು ಇತ್ತೀಚೆಗಂತೂ ಹೆಚ್ಚಾಗಿ ಕೇಳಿ ಬರುತ್ತಿವೆ. ಸ್ಯಾಂಡಲ್ವುಡ್ನಲ್ಲಿ ನಟ ಯುವರಾಜ್ಕುಮಾರ್, ಶ್ರೀದೇವಿ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಚಂದನ್ ಶೆಟ್ಟಿ, ನಿವೇದಿತಾ ಬೇರೆ ಬೇರೆಯಾಗಿದ್ದಾರೆ. ಟಾಲಿವುಡ್ನಲ್ಲಿ ನಾಗಚೈತನ್ಯ ಹಾಗೂ ಸಮಂತಾ ಡಿವೋರ್ಸ್ ನೀಡಿದ್ದಾರೆ. ಈ ಮಧ್ಯೆ ತಮಿಳಿನ ಸ್ಟಾರ್ ನಟ ಜಯಂ ರವಿ ತನ್ನ ಪತ್ನಿ ಆರತಿಗೆ ಡಿವೋರ್ಸ್ ನೀಡಲು ಮುಂದಾಗಿದ್ದಾರೆ.
ನಟ ಜಯರಾಂ ರವಿ ತಮಿಳು ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ನಟನೆಯ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು. ಇವರು ಪತ್ನಿ ಆರತಿಗೆ ಡಿವೋರ್ಸ್ ನೀಡಲು ಸಿದ್ಧರಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿದ್ದು, ಇವರಿಬ್ಬರ ನಡುವೆ ಬಿರುಕು ಮೂಡಿರುವುದಂತೂ ನಿಜ.
2009ರಲ್ಲಿ ಜಯಂ ರವಿ, ಆರತಿಯನ್ನು ವಿವಾಹವಾಗಿದ್ದರು. ಬಳಿಕ ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಜನಿಸಿದ್ದರು. ಮಕ್ಕಳು ಯಾರ ಜೊತೆ ಇದ್ದಾರೆ ಎಂಬುವುದು ತಿಳಿದಿಲ್ಲ. ಇಲ್ಲಿಗೆ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು 15 ವರ್ಷ ಕಳೆಯುತ್ತ ಬರುತ್ತಿದೆ. ಇಷ್ಟು ವರ್ಷ ಕಾಲ ಪರಸ್ಪರ ಆತ್ಮೀಯರಾಗಿದ್ದ ಈ ಜೋಡಿ ಇದೀಗ ದಿಢೀರ್ ಅಗಲಿಕೆಯ ಸುದ್ದಿ ಅಭಿಮಾನಿಗಳಲ್ಲಿ ಬೇಸರ ತರಿಸಿದೆ.