ಇಂದು ಯಂಗ್ ಟೈಗರ್ ಜೂನಿಯರ್ ಎನ್ ಟಿ ಆರ್ ಹುಟ್ಟುಹಬ್ಬ. 41 ನೇ ವಸಂತಕ್ಕೆ ಕಾಲಿಟ್ಟಿರೋ ತಾರಕ್ ಗೆ ದೇವರ ಫಿಲ್ಮ್ ಟೀಮ್ ಸ್ಪೆಷಲ್ ಗಿಫ್ಟ್ ಕೊಟ್ಟಿದೆ. ಚಿತ್ರದ ಮೊದಲ ಸಾಂಗ್ ರಿಲೀಸ್ ಮಾಡಿದೆ. ಫಿಯರ್ ಹೆಸರಿನ ಹಾಡು ಇದಾಗಿದ್ದು, ಸೆನ್ಸೇಷನಲ್ ಮ್ಯೂಸಿಕ್ ಕಂಪೋಸರ್ ಅನಿರುದ್ ರವಿಚಂದರ್ ಸಂಗೀತ ಒದಗಿಸಿದ್ದಾರೆ.
ಫಿಯರ್ ಕನ್ನಡ ವರ್ಷನ್ ಹಾಡಿಗೆ ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ನೀಡಿದ್ದಾರೆ. ಫಿಯರ್ ಸಾಂಗ್ ಲಿರಿಕ್ಸ್ ಪ್ಲಸ್ ಮ್ಯೂಸಿಕ್ ಸಖತ್ ಪವರ್ ಫುಲ್ ಆಗಿದ್ದು, ತಾರಕ್ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ. ದೇವರ ಮೇಲಿನ ನಿರೀಕ್ಷೆ ಹೆಚ್ಚುತ್ತಿದೆ.
‘ದೇವರ’ ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ತಾರಕ್ ಭಕ್ತರು ಮಾತ್ರವಲ್ಲ ಇಡೀ ಚಿತ್ರಜಗತ್ತೇ ಚಾತಕ ಪಕ್ಷಿಯಂತೆ ಕಣ್ಣರಳಿಸಿ ಕೂತಿದೆ. ಕೊರಟಾಲ ಶಿವ ನಿರ್ದೇಶನದಲ್ಲಿ ದೇವರ ಮೂಡಿಬಂದಿದ್ದು, ಜನತಾ ಗ್ಯಾರೇಜ್ ನಂತರ ತಾರಕ್ ಹಾಗೂ ಕೊರಟಾಲ ಕಾಂಬೋ ಮತ್ತೆ ಒಂದಾಗಿದೆ. ಯುವಸುಧಾ ಆರ್ಟ್ಸ್, ಎನ್ಟಿಆರ್ ಆರ್ಟ್ಸ್ ಜಂಟಿಯಾಗಿ ಈ ಸಿನಿಮಾ ನಿರ್ಮಿಸಿದೆ.
ಯಂಗ್ ಟೈಗರ್ ಜೊತೆಗೆ ಬಿಟೌನ್ ಬ್ಯೂಟಿ ಜಾಹ್ನವಿ ಕಪೂರ್, ಸೈಫ್ ಅಲಿಖಾನ್, ಪ್ರಕಾಶ್ ರಾಜ್, ಶ್ರೀಕಾಂತ್, ಮುರುಳಿ ಶರ್ಮಾ ಸೇರಿದಂತೆ ಅತೀ ದೊಡ್ಡ ತಾರಾಬಳಗ ಈ ಸಿನಿಮಾದಲ್ಲಿದೆ. ಭರ್ತಿ 300 ಕೋಟಿ ವೆಚ್ಚದಲ್ಲಿ ಎರಡು ಭಾಗದಲ್ಲಿ ತಯಾರಾಗಿರೋ ದೇವರ ಚಿತ್ರದ ಮೊದಲ ಭಾಗ, ಇದೇ ಅಕ್ಟೋಬರ್ 10 ರಂದು ವರ್ಲ್ಡ್ವೈಡ್ ರಿಲೀಸ್ ಆಗ್ತಿದೆ.