ಟಿಟೌನ್ ಯಂಗ್ ಟೈಗರ್ ಜೂನಿಯರ್ ಎನ್ ಟಿ ಆರ್ ಕುರಿತಾಗಿ ಬಿಟೌನ್ ಅಂಗಳದಿಂದ ಬಿಗ್ ಬ್ರೇಕಿಂಗ್ ನ್ಯೂಸ್ ವೊಂದು ಹೊರಬಿದ್ದಿದೆ. ತೆಲುಗು ಸಿನಿಮಾರಂಗದಿಂದ ತಾರಕ್, ಹಿಂದಿ ಚಿತ್ರರಂಗಕ್ಕೆ ಶಿಫ್ಟ್ ಅಗಲಿದ್ದಾರೆನ್ನುವ ಸೆನ್ಸೇಷನಲ್ ಸಮಾಚಾರವೊಂದು ಹರಿದಾಡ್ತಿದೆ. ಬಾಲಿವುಡ್ ಹಾರ್ಟ್ ಥ್ರೋಬ್ ಹೃತಿಕ್ ರೋಷನ್ ಅಭಿನಯದ ವಾರ್ 2 ಚಿತ್ರದ ಮೂಲಕ ಬಿಟೌನ್ ಗೆ ಲಗ್ಗೆ ಇಟ್ಟಿರೋ ಯಂಗ್ ಟೈಗರ್ ಗೆ ಹಿಂದಿ ಬೆಲ್ಟ್ ನಲ್ಲಿ ಬೇಡಿಕೆ ಹೆಚ್ಚಿದೆಯಂತೆ. ಬಿಟೌನ್ ಏಜೆನ್ಸಿಯೊಂದು ಕೊಮರಮ್ ಭೀಮ್ ನ ಹಿಂದಿ ಬೆಲ್ಟ್ ನಲ್ಲೇ ಉಳಿಸಿಕೊಳ್ಳೋಕೆ ಮಾಸ್ಟರ್ ಪ್ಲಾನ್ ಮಾಡಿದೆಯಂತೆ.
ಆರ್ ಆರ್ ಆರ್ ಗೆ ಬ್ಯಾಕ್ ಟು ಬ್ಯಾಕ್ ಹಿಂದಿ ಸಿನಿಮಾಗಳ ಆಫರ್ ಮಾಡಲಾಗ್ತಿದೆಯಂತೆ. ಸದ್ಯ ಈ ಸುದ್ದಿ ಬಾಲಿವುಡ್ ನಿಂದ ಸೌತ್ ಗೆ ಬಂದು ಮುಟ್ಟಿದೆ. ಯಂಗ್ ಟೈಗರ್ ತೆಲುಗಿಗೆ ಬಾಯ್ ಹೇಳಿ, ಬಿಟೌನ್ ನಲ್ಲಿ ಸೆಟಲ್ ಆಗಿಬಿಡ್ತಾರಾ? ಎಂಬ ಪ್ರಶ್ನೆ ಅಭಿಮಾನಿಗಳನ್ನ ಇನ್ನಿಲ್ಲದಂತೆ ಕಾಡ್ತಿದೆ
ಅಷ್ಟಕ್ಕೂ, ಯಂಗ್ ಟೈಗರ್ ಮೇಲೆ ಬರೀ ಬಾಲಿವುಡ್ ಮಂದಿ ಮಾತ್ರವಲ್ಲ ಹಾಲಿವುಡ್ ಮಂದಿಯೂ ಕಣ್ಣಿಟ್ಟಿದ್ದಾರೆ. ಆರ್ ಆರ್ ಆರ್ ಚಿತ್ರದಲ್ಲಿ ಟೈಗರ್ ಜೊತೆ ಕಾದಾಡಿದ ಯಂಗ್ ಟೈಗರ್ ನ ನೋಡಿ ದಂಗಾಗಿದ್ದಾರೆ. ಅದರಲ್ಲೂ ಆಸ್ಕರ್ ಅವಾರ್ಡ್ ಕೊಳ್ಳೆ ಹೊಡೆದ ಮೇಲಂತೂ ತಾರಕ್ ಹಾಗೂ ಚೆರ್ರಿ ಮೇಲೆ ಹಾಲಿವುಡ್ ಸಿನಿಮಾ ಪ್ರೊಡ್ಯೂಸರ್ಸ್ ಅಂಡ್ ಡೈರೆಕ್ಟರ್ಸ್ ಒಂದು ಕಣ್ಣಿಟ್ಟಿದ್ದಾರೆ.
ಹೀಗಿರುವಾಗ, ತಾರಕ್ ಬಾಲಿವುಡ್ ಗೆ ಹೋಗಿ ಸೆಟಲ್ ಆಗೋದು ದೊಡ್ಡ ಮಾತಲ್ಲ. ಆದರೆ, ತೆಲುಗು ಆಡಿಯನ್ಸ್ ಯಂಗ್ ಟೈಗರ್ ನ ಬಾಲಿವುಡ್ ಗೆ ಬಿಟ್ಟುಕೊಡೋದು ಕಷ್ಟ ಆಗುತ್ತೆ. ಅಷ್ಟಕ್ಕೂ, ತಾರಕ್ ಏನು ನಾನು ಬಿಟೌನ್ ಗೆ ಹೋಗಿ ಸೆಟಲ್ ಆಗ್ತೀನಿ ಅಂತ ಹೇಳಿಕೊಂಡಿಲ್ಲ. ಬಟ್ ವಾರ್ 2 ರಿಲೀಸ್ ಗೂ ಮೊದಲೇ ಜೂನಿಯರ್ ಎನ್ಟಿಆರ್ ಗೆ ಬಿಟೌನ್ ನಲ್ಲಿ ಹೆಚ್ಚಿರುವ ಬೇಡಿಕೆ ನೋಡಿ ಇಂತಹದ್ದೊಂದು ಸುದ್ದಿ ಹಬ್ಬಿಸಿದ್ದಾರೆ.
ವಾರ್ 2 ಹೃತಿಕ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ. ಅಯಾನ್ ಮುಖರ್ಜಿ ಡೈರೆಕ್ಟ್ ಮಾಡಿದ್ದು, ಯಶ್ ರಾಜ್ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಇದೊಂದು ಸ್ಪೈ ಯೂನಿವರ್ಸ್ ಚಿತ್ರವಾಗಿದ್ದು, ಗ್ರೀಕ್ ಗಾಡ್ ಹಾಗೂ ಯಂಗ್ ಟೈಗರ್ ಜುಗಲ್ ಬಂಧಿ ನೋಡೋದಕ್ಕೆ ಪ್ರೇಕ್ಷಕರು ಕಣ್ಣರಳಿಸಿದ್ದಾರೆ. ಇತ್ತೀಚೆಗಷ್ಟೇ ತಾರಕ್, ದೇವರ ಸಿನಿಮಾಗೆ ಬ್ರೇಕ್ ಹಾಕಿ ‘ ವಾರ್2’ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. 12 ದಿನ ಶೂಟಿಂಗ್ ಮುಗಿಸಿಕೊಟ್ಟು ವಾಪಾಸ್ ಆಗಿದ್ದಾರೆ.
ಇತ್ತ ದೇವರ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ದೇವರ ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಸಿನಿಮಾ. ಕೊರಟಾಲ ಶಿವ ಡೈರೆಕ್ಷನ್ ಮಾಡಿದ್ದು, ಯುವಸುಧಾ ಆರ್ಟ್ಸ್ ಮತ್ತು ಎನ್ ಟಿ ಆರ್ ಆರ್ಟ್ಸ್ ದೇವರ ಚಿತ್ರ ನಿರ್ಮಿಸಿದೆ. ಎರಡು ಭಾಗಗಳಲ್ಲಿ ತಯಾರಾಗಿರೋ ದೇವರ ಚಿತ್ರದ ಮೊದಲ ಭಾಗ ಇದೇ ಅಕ್ಟೋಬರ್ 10 ರಂದು ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ.